ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ವಿಚಾರ ಕೇಸ್‌ಗೆ ಹೊಸ ಟ್ವಿಸ್ಟ್

  • 30 Dec 2023 , 5:19 AM
  • Belagavi
  • 101

ಬೆಳಗಾವಿ: ಚಿತ್ರಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ವಿಚಾರಕ್ಕೆ ಸಂಬಂಧಿಸಿದ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈಗಾಗಲೇ ಶಿವಾನಂದ ವಾಲಿ ಎಂಬ ವ್ಯಕ್ತಿವೋರ್ವನ ವಿರುದ್ಧ ಮಾಟ ಮಂತ್ರದ ಆರೋಪ ಕೇಳಿ ಬಂದಿದೆ ಈ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಈ ಸಂದರ್ಭದಲ್ಲಿ ವಾಲಿ ಬಳಿ ಮಾಟ ಮಂತ್ರದ ವಸ್ತುಗಳು ದೊರೆತಿವೆ. 

            ಅಷ್ಟಕ್ಕೂಯಾರಿತಶಿವಾನಂದವಾಲಿ ?

ಶಿವಾನಂದ ವಾಲಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಡಗಿ ಗ್ರಾಮದ ನಿವಾಸಿ, ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಕುಟುಂಬದ ಆಪ್ತ ಎನ್ನಲಾಗಿದೆ. ಈ ಹಿಂದೆ ಈ ಶಿವಾನಂದ ವಾಲಿ ವಿರುದ್ಧ ಕೆ‌.ಕಲ್ಯಾಣ್ ಅಪಹರಣದ ಆರೋಪ ಮಾಡಿದ್ದರು. ಪತ್ನಿ, ಅತ್ತೆ, ಮಾವರನ್ನು ಅಪಹರಣ ಮಾಡಿದ್ದಾರೆಂದು ಆರೋಪಿಸಿದ್ದರು. ನಂತರ ಪತ್ನಿ, ಅತ್ತೆ, ಮಾವ ಅಕೌಂಟ್‌ನಿಂದ ಹಣ ವರ್ಗಾವಣೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಬೆಳಗಾವಿ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read All News