ಕೃಷ್ಣಾ ನದಿಯ ತೀರಕ್ಕೆ ನಿಯೋಜನೆಯಾದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ
- 14 Jan 2024 , 11:50 PM
- Belagavi
- 185
ಬೆಳಗಾವಿ: ಜಿಲ್ಲೆಯ ಗಡಿಭಾಗ ಕೃಷ್ಣಾ ನದಿ ತೀರದಲ್ಲಿ ಈ ಬಾರಿ ಮತ್ತೆ ಪ್ರವಾಹ ಬರುವ ಮೂನ್ಸೂಚನೆ ಉಂಟಾಗಿದೆ. ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ (ಎನ್‌ಡಿಆರ್‌ಎಫ್) 20 ಜನರ ತಂಡ ಈಗಾಗಲೇ ಚಿಕ್ಕೋಡಿಗೆ ಆಗಮಿಸಿದ್ದು. ಹೈದ್ರಾಬಾದ್ ನಿಂದ ಎನ್ಡಿಆರ್ಎಫ್ ಪಡೆಯು ಚಿಕ್ಕೋಡಿಗೆ ಆಗಮಿಸಿದೆ. ಕೃಷ್ಣಾ ತೀರದಲ್ಲಿ ಪ್ರವಾಹ ಬರುವ ಮುನ್ನ ಅಧ್ಯಯನ ನಡೆಸಲಿರುವ ಈ ತಂಡ ಯಡೂರು, ಇಂಗಳಿ ಸೇರಿದಂತೆ ನದಿ ತೀರದ ಗ್ರಾಮಗಳಲ್ಲಿ ನಿಯೋಜನೆಗೊಳ್ಳಲಿದೆ.