ಹುಕ್ಕೇರಿ: ತಾಲೂಕಿನ ಅರ್ಜುನವಾಡ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನಾಧಾರಿತ ಕಥೆ ಕುರಿತು ಝೀ ಟಿ.ವಿಯಲ್ಲಿ ಪ್ರಸಾರವಾಗುತ್ತಿರುವ 'ಮಹಾನಾಯಕ' ಧಾರಾವಾಹಿಯ ಭಾವಚಿತ್ರವನ್ನು ಇಂದು ಗ್ರಾಮಸ್ಥರು ಅನಾವರಣ ಮಾಡಿದರು. ಬಾಬಾಸಾಹೇಬರ ಜೀವನ ಕುರಿತು ಇರುವ ಈ ಧಾರಾವಾಹಿಯನ್ನು ಎಲ್ಲರೂ ನೋಡಿ ಅವರು ಹಾಕಿಕೊಟ್ಟ ರೂಪುರೇಷೆಗಳನ್ನೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಏಳಿಗೆಗಾಗಿ ನಿಸ್ವಾರ್ಥಿಯಾಗಿ ಕೆಲಸಮಾಡುವಂತೆ ಹೇಳಿ ನಾಯಕರೆಲ್ಲರೂ ಸೇರಿ ನಾಮಫಲಕಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಯುವಕರು, ದಲಿತ ಮುಖಂಡರು ಹಾಗೂ ಇನ್ನೀತರರು ಉಪಸ್ಥಿತರಿದ್ದರು.