ಕ್ಯಾಂಪ್ ದಸರಾ ಉತ್ಸವ ಮಂಡಲದವರು ನಾಳೆ ಜಿಲ್ಲಾಧಿಕಾರಿಗಳ ಭೇಟಿಗೆ ನಿರ್ಧಾರ

  • 29 Dec 2023 , 3:00 AM
  • Belagavi
  • 254

ಬೆಳಗಾವಿ: 1901ರಲ್ಲಿ ಪ್ರಾರಂಭಿಸಲಾದ ನಗರದ ಕ್ಯಾಂಪ್ ದಸರಾ ಉತ್ಸವ ಆಚರಣೆಯ ವಿಚಾರವಾಗಿ ಇಂದು ಉತ್ಸವ ಮಂಡಲದವರು ಸಭೆ ನಡೆಸಿದರು. ಪ್ರತಿವರ್ಷ ವಿಜ್ರಂಭಣೆಯಿಂದ ಆಚರಿಸುತ್ತಿರುವ ಕ್ಯಾಂಪ್ ದಸರಾ ಉತ್ಸವ ವಾಡಿಕೆಯಂತೆ ದೇವಿಯ ಐದು ರಥಗಳನ್ನು ಹೊರತೆಗೆದು, ಮೆರವಣಿಗೆ ನಡೆಸಿ ಅದೆ ಮೈದಾನದಲ್ಲಿ ಕೊನೆಗೊಳಿಸುದ್ದೇವು. ಆದರೆ ಈ ವರ್ಷ ಕೊರೋನಾ ಹಿನ್ನೆಲೆಯಿಂದ ಶಿಬಿರದಲ್ಲಿ ದಸರಾ ಆಚರಣೆಗೆ ಸಂಬಂಧಿಸಿದಂತೆ ಬೆಳಗಾವಿ ಉತ್ಸವ ಮಂಡಲದೊಂದಿಗೆ ಸಭೆ ಸೇರಿ ದಸರಾ ಉತ್ಸವ ಆಚರಣೆಗೆ ಅನುಮತಿ ಮತ್ತು ಇತರ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ ಮತ್ತು ಸರ್ಕಾರದ ಮಾರ್ಗಸೂಚಿಯಂತೆ ಈ ವರ್ಷ ದಸರಾ ಉತ್ಸವವನ್ನು ಆಚರಿಸಲು ನಿರ್ಧರಿಸಲಾಯಿತು.

ಎಲ್ಲಾ ಷರತ್ತುಗಳಿಗೆ ಮಂಡಲದ ಪದಾಧಿಕಾರಿಗಳೆಲ್ಲ ಒಪ್ಪಿಗೆಯನ್ನು ಕೂಡ ಸಲ್ಲಿಸಿದರು. ಆದ್ದರಿಂದ ನಾಳೆ ನಾವು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಅವರ ಅಧಿಸೂಚನೆಯಂತೆ ದಸರಾ ಉತ್ಸವದ ನಿರ್ಧಾರ ಕೈಗೊಳ್ಳುವುದಾಗಿ ದಸರಾ ಉತ್ಸವ ಮಂಡಲದವರು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಕೆ ಟಿ ಪೂಜಾರಿ ಮತ್ತು ಪುತ್ರರ ಮರಿಯಮಾ ದೇವಿ, ಮದ್ರಾಸ್ ಬಿಎಚ್‌ಟಿ ಪ್ರದೇಶದ ಮುತ್ತು ಮರಿಯಮ್ಮ, ಮೀನು ಮಾರುಕಟ್ಟೆಯಿಂದ ಕುಂತಿ ದೇವಿ, ಹಳೆಯ ತೆಲುಗು ಕಾಲೋನಿಯ ಮರಿಯಾಮಾ ಉಪಸ್ಥಿತರಿದ್ದರು.

Read All News