ಬೆಂಗಳೂರು: 2020 ವರ್ಷ ಭಾರತದ ಪಾಲಿಗೆ ಬಹಳ ಕರಾಳವಾದ ವರ್ಷವಾಗಿದೆ. ಈ ವರ್ಷ ಗಣ್ಯರು, ನಟರು ಸೇರಿದಂತೆ ಉದಯೋನ್ಮುಖ ಯುವನಟರು ಈ ಭಾರಿ ಇಹಲೋಕವನ್ನು ತ್ಯಜಿಸಿದ್ದಾರೆ. ಈಗ ಮತೋರ್ವ ಯುವ ನಟಿ ಮಿಸ್ತಿ ಮುಖರ್ಜಿ ಕೂಡ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಪ್ರೈವೇಟ್ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ. 27 ವರ್ಷ ವಯಸ್ಸಾಗಿತ್ತು ಕೆಲ ತಿಂಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.
ನಟಿಮಿಸ್ತಿಮುಖರ್ಜಿಸಾವಿಗೆಕಾರಣಏನುಗೊತ್ತಾ..?
ಸಿನಿ ತಾರೆಯರಿಗೆ ಫಿಟ್‌ನೆಸ್ ಕಾಪಾಡಿಕೊಳ್ಳವುದು ಅನಿವಾರ್ಯವಾಗಿರುತ್ತದೆ. ಒಂದು ರೋಲ್ ನಿಂದ ಇನ್ನೊಂದು ರೋಲ್ ಮಾಡಲು ಅವರು ದಪ್ಪ, ಸಣ್ಣಗಾಗಬೇಕಾಗುತ್ತದೆ ಈ ಉದ್ದೇಶದಿಂದ ವಿವಿಧ ರೀತಿಯ ಡಯಟ್ ಮಾಡುತ್ತಾರೆ. ಮಿಸ್ತಿ ಮುಖರ್ಜಿ ಅವರ ನಿಧನಕ್ಕೆ ಕಾರಣ ಆಗಿದ್ದು ಈ ಡಯಟ್. ಮಿಸ್ತಿ ಮುಖರ್ಜಿ ಕೆಟೊ ಡಯಟ್‌ನಿಂದ ನಿಧನರಾಗಿದ್ದಾರೆಂದು ತಿಳಿದುಬಂದಿದೆ. ಶೀಘ್ರ ತೂಕ ಇಳಿಸಿಕೊಳ್ಳುವ ಸಂಬಂಧ ಕೆಟೊ ಡಯಟ್ ಮಾಡುತ್ತಿದ್ದರು ಈ ಕೇಟೋ ಡಯಟ್ ಮಿಸ್ತಿ ಮುಖರ್ಜಿಯ ಸಾವಿಗೆ ಕಾರಣ ಆಗಿದೆ.