ಕೋರೊನಾ ಆತಂಕ, ಗೋಕಾಕ ಪೀಡಬ್ಲ್ಯೂಡಿ ಕಚೇರಿ ಸೀಲ್ ಡೌನ್

  • 15 Jan 2024 , 12:44 AM
  • Belagavi
  • 104
ಬೆಳಗಾವಿ: ಸೋಂಕಿತನ ಸಂಪರ್ಕಕ್ಕೆ ಹೋಗಿ ಬಂದವನಿಂದ ಇಡೀ ಸರ್ಕಾರಿ ಕಚೇರಿಯೇ ಸೀಲ್ ಡೌನ್ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ನಡೆದಿದೆ. ಗೋಕಾಕ್ ಪಿಡಬ್ಲ್ಯೂಡಿ ಕಚೇರಿಯನ್ನು ಸೀಲ್ ಡೌನ್ ಮಾಡಿದಷ್ಟೇ ಅಲ್ಲದೆ ಲೋಕೊಪಯೋಗಿ ಇಲಾಖೆಯ 14 ಜನ ಅಧಿಕಾರಿಗಳಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಸರ್ಕಾರಿ ಕಚೇರಿಯ ಸಿಬ್ಬಂಧಿಯೇ ಸೋಂಕಿತನ ಸಂಪರ್ಕಕ್ಕೆ ಬಂದಿದ್ದರಿಂದ ಈ ಘಟನೆ ನಡೆದಿದೆ. ಮುಂಜಾಗೃತಾ ಕ್ರಮವಾಗಿ ಎಲ್ಲರಿಗೂ ಸೀಲ್ ಹಾಕಿ ತಾಲೂಕು ಆಡಳಿತ ಹೋಮ್ ಕ್ವಾರಂಟೈನ್ ಮಾಡಿದೆ. ಸೋಂಕಿತ ಇದ್ದ ಕಲ್ಲೋಳಿ ಗ್ರಾಮದ ವ್ಯಕ್ತಿಯ ಮನೆಗೆ ಪಿಡಬ್ಲ್ಯೂಡಿ ಕಚೇರಿಯಲ್ಲಿ ದ್ವಿತಿಯ ದರ್ಜೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಹೋಗಿ ಬಂದಿದ್ದರಿಂದ ಈ ಅವಾಂತರ ಸೃಷ್ಟಿಯಾಗಿದೆ.

Read All News