ರಾಣೇಬೆನ್ನೂರ: ರಾಜ್ಯದಲ್ಲಿ ಕೊರೋನಾ ಹಾವಳಿ ಹೆಚ್ಚುತ್ತಿರುವ ಹಿನ್ನಲೆಯಿಂದ ಸರ್ಕಾರ ಈ ಮಾರಕ ರೋಗವನ್ನು ತಡೆಗಟ್ಟಲು ಸಭೆ, ಸಮಾರಂಭಗಳಿಗೆ ನಿರ್ಭಂದ ಹೇರಲಾಗಿದೆ. ಈ ಮಧ್ಯ ತಾಲೂಕಿನ ಹುಣಿಸಿಕಟ್ಟಿ ಗ್ರಾಮದ ಬಳಿ ಸಾವಿರಾರು ಜನರು ಸೇರಿಸಿಕೊಂಡು ಟಗರಿನ ಕಾಳಗ ನಡೆಸಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಹಳ್ಳಿಗಳ ಕಡೆ ಜಾತ್ರೆ, ಹಬ್ಬಗಳ ಸಮಯದಲ್ಲಿ ಟಗರಿನ ಕಾಳಗ ಏರ್ಪಡಿಸುವುದು ಸರ್ವೇಸಾಮಾನ್ಯ. ಆದರೆ ಇಂತಹ ಸಂದರ್ಭದಲ್ಲಿ ಸಾವಿರಾರು ಜನರನ್ನು ಸೇರಿಸಿಕೊಂಡು ಸರ್ಕಾರ ನಿಯಮ ಉಲ್ಲಂಗನೆ ಮಾಡಿರುವುದು ನಿಜಕ್ಕೂ ತಪ್ಪಾಗಿದೆ. ಈ ಕುರಿತು ಈಗಾಗಲೇ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‍ಯಾಗಿದ್ದು.
ಇಲ್ಲಿಯವರಿಗೂ ಪೋಲಿಸರಾಗಲಿ ಹಾಗೂ ತಾಲೂಕ ಆಡಳಿತಯಾಗಲಿ ಯಾವುದೇ ಕ್ರಮಕೈಗೊಳ್ಳದೇ ಇರುವುದು ಪ್ರಜ್ಞಾವಂತ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೋವೀಡ್-19 ಇರುವುದರಿಂದ ಪೋಲಿಸ್ ಇಲಾಖೆಯು ಅನುಮತಿ ನೀಡಲು ಬರುವುದಿಲ್ಲ ಆದರೂ ಸಹಿತ ಕೆಲವು ಜನರು ಕೂಡಿಕೊಂಡು ಈ ಟಗರಿನ ಕಾಳಗವನ್ನು ಆಯೋಜನೆ ಮಾಡಿದ್ದು, ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಈ ಟಗರಿನ ಕಾಳಗದಲ್ಲಿ ಭಾಗವಹಿಸಿದ್ದಾರೆ.
ಯಾರು ಕೂಡ ಯಾವುದೇ ಮಾಸ್ಕ ಹಾಕದೇ ಸಾಮಾಜಿಕ ಅಂತರವನ್ನು ಪಾಲಿಸದೇ ಕಾಳಗದಲ್ಲಿ ಭಾಗವಹಿಸಿದ್ದರು. ಈಗಾಗಲೇ ತಾಲೂಕಿನಲ್ಲಿ ಕೊರೋನಾ ಹೆಚ್ಚಾಗುತ್ತಿದ್ದು ಇಂತಹ ಸಮಯದಲ್ಲಿ ಸಾವಿರಾರು ಜನರ ಕೂಡಿಕೊಂಡು ಟಗರಿನ ಕಾಳಗ ನಡೆಸಿದ್ದು ಎಷ್ಟರಮಟ್ಟಿಗೆ ಸರಿಯಾಗಿದೆ. ಇದನ್ನು ತಡೆಯಬೇಕಾದ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನುಮಾನ ಮೂಡಿಸಿದೆ.
ಕೂಡಲೇ ಪೋಲಿಸ್ ಇಲಾಖೆ ಹಾಗೂ ತಾಲೂಕ ಆಡಳಿತ ಇದರ ಬಗ್ಗೆ ಸೂಕ್ತ ಕ್ರಮಕೈಗೊಂಡು. ಕೋರೊನ್ ಹಾವಳಿ ಮುಗಿಯವರಿಗೂ ಇಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು ಎಂದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.