ಗಡಿನಾಡಿಗೆ ಬಿಟ್ಟು ಬಿಡದೆ ಕಾಡುತ್ತಿದೆ ಮಹಾರಾಷ್ಟ್ರ ನಂಜು
- 13 Jan 2024 , 2:37 PM
- Belagavi
- 99
ಬೆಳಗಾವಿ: ಮಹಾರಾಷ್ಟ್ರದ ನಂಜು ಬಿಟ್ಟು ಬಿಡದೆ ಗಡಿನಾಡಿಗೆ ಕಾಡುತ್ತಿದೆ. ಇಂದು ಮತ್ತೆ ಬೆಳಗಾವಿ ಜಿಲ್ಲೆಯಲ್ಲಿ 12 ಕೊರೊನಾ ಪಾಸಿಟಿವ್ ಕೇಸ್ ಪತ್ತೆ ಆಗಿದ್ದು ಅದರಲ್ಲಿ ಮಹಾರಾಷ್ಟ್ರ ದಿಂದ ಬಂದ 11 ಜನ ಮತ್ತು ಧಾರವಾಡದಿಂದ ಬಂದ ಓರ್ವ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಕೇಸ್ 222ಕ್ಕೇ ಏರಿಕೆಯಾಗಿದೆ. ಈ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ 109 ಆಕ್ಟಿವ್ ಕೇಸ್ ಇದ್ದು 126 ಜನರು ಗುಣಮುಖರಾಗಿದ್ದಾರೆ. ದಿನೇ ದಿನೇ ಬೆಳಗಾವಿಗೆ ಮಹಾರಾಷ್ಟ್ರ ನಂಜು ಹೆಚ್ಚುತ್ತಿರುವುದರಿಂದ ಜನರನ್ನು ಆತಂಕಕ್ಕೆ ಇಡು ಮಾಡಿದೆ.