ಪಶ್ಚಿಮ ಪದವೀಧರ ಕ್ಷೇತ್ರದ ಮತಗಟ್ಟೆಗೆ ಉಪವಿಭಾಗಾಧಿಕಾರಿ ಅನ್ನಪೂರ್ಣಾ ಮುದಕ್ಕಮ್ಮನವರ ಭೇಟಿ

  • 23 Dec 2023 , 7:31 AM
  • Haveri
  • 92

ಬಂಕಾಪುರ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಪಟ್ಟಣದ ಪುರಸಭೆ ಹಾಗು ಉಪತಹಶೀಲ್ದಾರ ಕಚೇರಿಗೆ ಉಪವಿಭಾಗಾಧಿಕಾರಿ ಅನ್ನಪೂರ್ಣಾ ಮುದಕ್ಕಮ್ಮನವರ ಬೇಟಿ ನೀಡಿ ಅಧಿಕಾರಿಗಳೋಂದಿಗೆ ಚರ್ಚಿಸಿದರು. ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಕಾನೂನಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಲೋಪದೋಷಗಳು ನಡೆಯದಂತೆ ಮುಂಜಾಗೃತೆಕ್ರಮ ಅನುಸರಿಸಬೇಕು. ತಾಲೂಕಿನಾದ್ಯಂತ ಒಟ್ಟು ನಾಲ್ಕು ಪದವೀಧರ ಮತಗಟ್ಟೆಗಳನ್ನು ತೆರೆಯಲಾಗಿದೆ. ಬಂಕಾಪುರ ಪುರಸಭೆ 1, ದುಂಡಸಿ ಗ್ರಾಮಪಂಚಾಯತ್ ಆವರಣದಲ್ಲಿ 1, ಶಿಗ್ಗಾವಿ ತಹಶೀಲ್ದಾರ ಕಛೇರಿಯಲ್ಲಿ 2 ಪದವೀದರ ಚುನಾವಣೆ ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ಹೇಳಿದರಲ್ಲದೇ ತಾಲೂಕಿನಾದ್ಯಂತ ಒಟ್ಟು 1740 ಪದವೀದರ ಮತದಾರರನ್ನು ಹೋಂದಿದೆ ಎಂದು ಹೇಳಿದರು. ಪ್ರತಿ ಮತಗಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪ, ರ‍್ಯಾಮ್‌ಗಳ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಚುನಾವಣೆ ವೇಳೆಯಲ್ಲಿ ಪದವೀದರ ಮತದಾರರೂ ಸೇರಿದಂತೆ ಅಧಿಕಾರಿಗಳು ಕಡ್ಡಾಯವಾಗಿ ಸುರಕ್ಷೀತ ಅಂತರ, ಮಾಸ್ಕ, ಸ್ಯಾನಿಟೈಜರ್ ಸೇರಿದಂತೆ ಕೋವಿಡ್-19 ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಪ್ರಕಾಶ ಕುದರಿ ಉಪತಹಶೀಲ್ದಾರ ಎಂ.ಎಸ್.ಪಾಟೀಲ, ಬಸವರಾಜ ಹೊಂಕಳೆಪ್ಪನವರ, ಶಿರಸ್ತೆದಾರ ಗಣೇಶ ಸವಣೂರ, ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಸೇರಿದಂತೆ ಸಿಂಬAದಿಗಳು ಉಪಸ್ಥಿತರಿದ್ದರು.

Read All News