ಸಮಾಜ ಸೇವೆ ಮೂಲಕ ಜನಮನ ಗೆದ್ದ ಶ್ರೀಮತಿ ತನುಜಾ ಮಹೇಶ

  • 15 Jan 2024 , 2:54 AM
  • Mysuru
  • 262

ಸೋಮಶೇಖರಸಿ.ಜೆಚಪ್ಪರದಹಳ್ಳಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪುರುಷನಷ್ಟೇ ಮಹಿಳೆಯು ಸರಿ ಸಮಾನಳಾಗಿದ್ದಾಳೆ ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎನ್ನುವುದು ನಿಜವಾದ ಮಾತು. ಇಂದಿನ ದಿನಗಳಲ್ಲಿ ಯಾವುದೇ ಕ್ಷೇತ್ರದಲ್ಲಿ ನಾಲ್ಕಾನೆ ಕೆಲಸ ಮಾಡಿದರೆ ಸಾಕು ಅದರ ದುಪ್ಪಟ್ಟು ಪ್ರಚಾರಕ್ಕಾಗಿ ಹಾತೊರೆಯುತ್ತಾರೆ. ಇಂತಹ ಕಾಲದಲ್ಲಿ ಸದ್ದಿಲ್ಲದೆ, ಯಾವುದೇ ಪ್ರಚಾರದ ಹಂಗಿಲ್ಲದೆ, ಸಮಾಜದಲ್ಲಿ ಬಡವರ, ದೀನದಲಿತರ ಸೇವೆಯನ್ನು ಸರ್ವೇಜನ ಸುಖಿನೋ ಭವಂತು ಎನ್ನುವ ಮಾತಿನಂತೆ ಮೇಲು-ಕೀಳು ಎನ್ನದೆ ಜನಸೇವೆ ಜನಾರ್ದನ ಸೇವೆ ಎಂದು ತಿಳಿದು ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಮುಖಿ ಕಾರ್ಯ ಮಾಡುವವರು ವಿರಳಾತೀತ ವಿರಳರು.

ಈ ರೀತಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಶ್ರೀಮತಿ ತನುಜಾ ಮಹೇಶರೊಬ್ಬರು. ರಾಜಕೀಯ ಕ್ಷೇತ್ರ ಅಷ್ಟೇ ಅಲ್ಲದೆ ಸಮಾಜ ಸೇವೆಯ ಮೂಲಕ ಸಮಾಜದಲ್ಲಿ ತಮ್ಮದೇಯಾದ ಒಂದು ಛಾಪು ಮೂಡಿಸಿದ್ದಾರೆ. ಹಲವಾರು ರೀತಿಯ ಸಮಾಜಪರ ಕಾರ್ಯಗಳನ್ನು ಮಾಡುತ್ತಾ ಜನರ ಮನ್ನಣೆಗೆ ಪಾತ್ರರಾಗಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯವರಾದ ಶ್ರೀಮತಿ ತನುಜಾ ಮಹೇಶ ಮೈಸೂರು-ಚಾಮರಾಜ ಮತ ಕ್ಷೇತ್ರದವರಾಗಿದ್ದಾರೆ.

ಸದ್ಯ ಭಾರತೀಯ ಜನತಾ ಪಕ್ಷದಲ್ಲಿ ಗುರುತಿಸಿಕೊಂಡು ಚಾಮರಾಜ ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ, ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷೆಯಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ ಶ್ರೀಮತಿ ತನುಜಾ ಮಹೇಶ. ಇವರು ಚಿಕ್ಕಂದಿನಿAದ ರಾಷ್ಟಿಯ ಸ್ವಯಂ ಸೇವಕ (ಆರ್‌ಎಸ್‌ಎಸ್) ಸಂಘದ ಜೊತೆ ಒಡನಾಟ ಹೊಂದಿದ ಇವರು, ಮೈಸೂರು ಹಾಗೂ ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ ಎಲ್‌ಎಲ್‌ಬಿ. ಪದವಿ ಪಡೆದು ಸದ್ಯ ವಕೀಲರಾಗಿಯು ಕಾರ್ಯನಿರ್ವಹಿಸುತ್ತಿದ್ದಾರೆ.

ಇದರ ಜೊತೆಗೆ ಬಡಜನರ ಕಲ್ಯಾಣಕ್ಕಾಗಿ ತಮ್ಮ ಹೆಸರಿನಲ್ಲಿ “ತನುಜಾಮಹೇಶಪೌಂಡೇಶನ್” ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ದೀನದಲಿತರಿಗೆ, ಬಡವರಿಗೆ, ನಿರ್ಗತಿಕರಿಗೆ ಸದಾ ಸಹಾಯ ಹಸ್ತವನ್ನು ನೀಡುತ್ತಿರುವುದರ ಜೊತೆಗೆ ಈ ಸಂಸ್ಥೆ ಹಲವಾರು ಬಡಜನರಿಗೆ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿದೆ.

ಇವರ ಪತಿ ಮಹೇಶ ಕೂಡ ಪತ್ನಿ ತನುಜಾ ಅವರಿಗೆ ಸಮಾಜ ಸೇವೆಯಲ್ಲಿ ಸಾಥ ಕೊಡುವುದರ ಜೊತೆಗೆ ಅವರು ಕೂಡ ಸಮಾಜ ಸೇವೆಯಲ್ಲಿ ಪಾಲುದಾರರಾಗಿದ್ದಾರೆ ಎಂದರೆ ತಪ್ಪಾಗಲಾರದು. ಪತ್ನಿ ಶ್ರೀಮತಿ ತನುಜಾರವರ ರಾಜಕೀಯ, ಸಾಮಾಜಿಕ ಕೆಲಸದಲ್ಲಿ ಪತಿ ಮಹೇಶರವರು ಸದಾ ಬೆನ್ನಲುಬಾಗಿ ನಿಂತಿದ್ದಾರೆ. ಪತ್ನಿಯ ಕೆಲಸಕ್ಕೆ ಸದಾ ಸಾಥ ನೀಡುತ್ತಿದ್ದು ಸಮಾಜದಲ್ಲಿ ಆದರ್ಶ ದಂಪತಿಗಳಾಗಿದ್ದಾರೆ. ಜೊತೆಗೆ ತಮ್ಮ ತನುಜಾ ಮಹೇಶ ಪೌಂಡೇಶನ್ ಸಂಸ್ಥೆಯ ವತಿಯಿಂದ ಬಡ ಮಕ್ಕಳಿಗೆ ಸಹಾಯಧನ ಮಾಡುವುದರ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಜಾತಿ, ಧರ್ಮ, ಪಕ್ಷಭೇದ ಮರೆತು ಆತ್ಮೀಯತೆಯಿಂದ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಮೈಸೂರು, ಮಂಡ್ಯ, ಹಾಸನ ಸೇರಿದಂತೆ ಈ ಭಾಗಗಳಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಪಕ್ಷಕ್ಕೆ ಪ್ರಾಮಾಣಿಕ, ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ತನುಜಾ ಮಹೇಶ ರಾಜ್ಯ, ರಾಷ್ಟç ಮಟ್ಟದ ನಾಯಕರ ಜೊತೆ ಒಳ್ಳೇಯ ಸಂಪರ್ಕ ಹೊಂದಿದ್ದಾರೆ.

ಕ್ಷೇತ್ರದ ಜನರಿಗೆ ಯಾವುದೇ ಕಷ್ಟ ಕಾರ್ಪನ್ಯಗಳು ಎದುರಾದರೆ ಅವರ ಸುಖ ದುಃಖದಲ್ಲಿ ಭಾಗಿಯಾಗುವುದರ ಜೊತೆಗೆ ಮಾದರಿ ರಾಜಕಾರಣಿಯಾಗಿದ್ದಾರೆ. ತಮ್ಮ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಕನಸು ಕಂಡಿದ್ದಾರೆ. ಅಧಿಕಾರ ಇರಲಿ ಇರದಿರಲಿ ರಾಜಕೀಯ ಕ್ಷೇತ್ರ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವಿಶೀಷ್ಟವಾದ ಸೇವೆಯನ್ನು ಕೈಗೊಳ್ಳುವುದರ ಜೊತೆಗೆ ಮಹಾಮಾರಿ ಕೊರೋನಾದ ಲಾಕ್ಡೌನ್ ಸಂದರ್ಭದಲ್ಲಿ ಜನರ ಕಷ್ಟವನ್ನು ಅರಿತು ಈ ದಂಪತಿಗಳು ನಗರದ ಬಡಜನರಿಗೆ, ನಿರ್ಗತಿಕರಿಗೆ ದಿನಕ್ಕೆ 200 ರಿಂದ 250 ಆಹಾರ ಕಿಟ್‌ಗಳನ್ನು ಸತತ ಮೂರು ತಿಂಗಳಗಳ ಕಾಲ ವಿತರಿಸುವ ಮೂಲಕ ಜನರ ಪ್ರಶಂಸೆಯನ್ನು ಗಳಿಸಿದ್ದಾರೆ.

ಹೀಗೆ ಇನ್ನಿತರ ಹಲವಾರು ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಶ್ರೀಮತಿ ತನುಜಾ ಮಹೇಶ. ನಮ್ಮ ಈ ಭಾಗದಲ್ಲಿ ತನುಜಾ ಮಹೇಶರವರು ಒಳ್ಳೇಯ ಕೆಲಸ ಮಾಡುತ್ತಿದ್ದಾರೆ ಜೊತೆಗೆ ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಿದ್ದಾರೆ. ಅದರಲ್ಲು ನಮ್ಮನ್ನು ಸೇರಿದಂತೆ ಎಲ್ಲ ಜನರ ಕಷ್ಟ ಸುಖಗಳಲ್ಲಿ ಪಾಲುದಾರರಾಗಿದ್ದಾರೆ ನಮಗೆ ಯಾವುದೆ ಸಮಸ್ಯೆಗಳು ಎದುರಾದರೆ ಮೊದಲು ನಮಗೆ ನೆನಪಾಗುವುದೆ ತನುಜಾ ಮಹೇಶ. ಇಂತಹ ರಾಜಕಾರಣಿಗಳು ಇದ್ದರೆ ನಮ್ಮ ದೇಶ ಅಭಿವೃದ್ಧಿಯಾಗಲು ಇನ್ನಷ್ಟು ಸಹಕಾರಿಯಾಗುತ್ತದೆ ಎಂದು ಹೇಳುತ್ತಾರೆ ಸಚೀನ.

ಸಚೀನ ಸಿ ಆರ್. ಹೆಬ್ಬಾಳ, ಮೈಸೂರು

Read All News