ಹತ್ರಾಸ್‍ ಅತ್ಯಾಚಾರ ಖಂಡಿಸಿ ಡಾ||ಬಿ.ಆರ್. ಅಂಬೇಡ್ಕರ ಜನ ಜಾಗೃತಿ ವೇದಿಕೆ ಪ್ರತಿಭಟನೆ

  • 15 Jan 2024 , 12:12 AM
  • Belagavi
  • 144

ಯಮಕನಮರಡಿ: ಕೆಲವು ದಿನಗಳ ಹಿಂದೆ ನಡೆದ ಉತ್ತರ ಪ್ರದೇಶದ ಹತ್ರಾಸ್‍ ಜಿಲ್ಲೆಯ ಬೂಲ ಗಡಿಯಲ್ಲಿ ಮನಿಷಾ ವಾಲ್ಮೀಕಿ ಎಂಬ 19 ವರ್ಷದ ಯುವತಿಯ ಮೇಲೆ ನಾಲ್ಕು ಜನ ಪುಂಡರು ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಮತ್ತು ಭೀಕರವಾಗಿ ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಡಾ|| ಬಿ.ಆರ್.ಅಂಬೇಡ್ಕರ ಜನ ಜಾಗೃತಿ ವೇದಿಕೆ ಜಿಲ್ಲಾಘಟಕ ಬೆಳಗಾವಿ ಇವರ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು. ಶನಿವಾರ ದಿ.10 ರಂದು ಮುಂಜಾನೆ ಹತ್ತರಗಿ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭಿಸಿದ ಪ್ರತಿಭಟನಾ ರ್ಯಾಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ದಾದಬಾನಹಟ್ಟಿಯಲ್ಲಿ ಜಮಾಯಿಸಿ ನಂತರ ಯಮಕನಮರಡಿ ಪ್ರಮುಖ ಬೀದಿ ಮಾರ್ಗವಾಗಿ ಘೋಷಣೆಯ ಮೂಲಕ ಉಪತಹಶೀಲ್ದಾರಿಗೆ ಮನವಿ ಸಲ್ಲಿಸಿದರು. ಶೋಷಿತ ಮಹಿಳೆ, ಮಕ್ಕಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಅಲ್ಲಿಯ ಜನರಿಗೆ ಕಾನೂನಿನ ರಕ್ಷಣೆ ಇಲ್ಲ , ಕೂಡಲೇ ಅಲ್ಲಿಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕೆಂದು ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಭೀಮಗೋಳ ಆಗ್ರಹಿಸಿದರು. ನಂತರ ಮಾತನಾಡಿದ ಕಾರ್ಯದರ್ಶಿ ಆನಂದ ಕೆಳಗಡೆ, ಭಾರತದಲ್ಲಿ ಪರಿಶಷ್ಟ ಜಾತಿ ಜನಾಂಗದವರ ಮೇಲೆ ನಿರಂತರವಾಗಿ ಹಲ್ಲೆ, ದೌರ್ಜನ್ಯ ಮಹಿಳೆಯರ ಮೇಲೆ ಅತ್ಯಾಚಾರ, ಅಪಹರಣ, ಕೊಲೆ-ಸುಲಿಗೆ, ಸಾಮಾಜಿಕ ಬಹಿಷ್ಕಾರದಂತಹ ಭೀಕರ ಘಟನೆಗಳು ಯಗ್ಗಿಲ್ಲದೇ ನಡಿತಾನೆಯಿದೆ ಇಂತಹ ಆರೋಪಿಗಳಿಗೆ ಕಠಿಣವಾದ ಶಿಕ್ಷೆಯನ್ನು ವಿಧಿಸಬೇಕೆಂದು ಅಲ್ಲಿಯ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜಿತೇಂದ್ರ ಮರಡಿ, ಸಲಹಾ ಸಮೀತಿ ಸದಸ್ಯ ದಿಲೀಪ ಹೊಸಮನಿ, ಯಮಕನಮರಡಿ ಬ್ಲಾಕ್‍ ಅಧ್ಯಕ್ಷ ಶಶಿಕಾಂತ ಮೇತ್ರಿ, ಕೆಂಪಣ್ಣಾ ಶಿರಹಟ್ಟಿ, ಶ್ರೀನಿವಾಸ ವ್ಯಾಪಾರಿ, ಸುಧೀರ ಹುಕ್ಕೇರಿ, ಮಂಜುನಾಥ ಪಡದಾರ, ಸೊಮೇಶ ಜೀವನ್ನವರ, ಸದಾಶಿವ ಕರೆಪ್ಪನವರ, ಲಕ್ಷ್ಮಣ ಹೂಲಿ, ಯಮನಪ್ಪಾ ಗುಣದಾಳ, ಪಿಂಟು ಸೂರ್ಯವಂಶಿ, ಮಂಜುನಾಥ ಮರಡಿ, ಪ್ರಕಾಶ ಕೋಳಿ, ಉಮೇಶ ಮಾಳಗಿ, ಆನಂದರಾಯಣ್ಣವರ, ಕೆಂಪಣ್ಣಾ ಬೇವಿನಕಟ್ಟಿ, ಬಸವರಾಜ ಭೀಮಗೋಳ, ಆನಂದ ಕಂಠಿ, ಅಪ್ಪಾಜಿ ಕಂಠಿ, ಸಂತೋಷ ಭೀಮಗೋಳ ಹಾಗೂ ಮಹಿಳೆಯರು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Read All News