ವಿರಕ್ತಮಠದ ಲಿಂಗೈಕ್ಯ. ಸಚ್ಚಿದಾನಂದ ಮಹಾಸ್ವಾಮಿಜೀ ಭಾವಚಿತ್ರದ ಮೆರವಣೆಗೆ

  • 18 Dec 2023 , 1:11 AM
  • Haveri
  • 123

ಹಾವೇರಿ: ಶಿಗ್ಗಾವಿ ತಾಲೂಕಿನ ಚಂದಾಪುರ ಗ್ರಾಮದ ವಿರಕ್ತಮಠದ ಸಚ್ಚಿದಾನಂದ ಮಹಾಸ್ವಾಮಿಜೀಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆಯಲ್ಲಿ ಅ.4 ರಂದು ಶಿವಾಧಿನರಾದರು. ಆದ್ದರಿಂದ ಇಂದು ಅವರ ಭಕ್ತರು ಚಂದಾಪುರದ ತಾಂಡಾ, ನೀರಲಕಟ್ಟಿ ಗ್ರಾಮದಲ್ಲಿ ಶ್ರೀಗಳವರ ಭಾವಚಿತ್ರದ ಮೆರವಣಿಗೆ ಸಂಚರಣೆ ಮಾಡಿದರು. ಮೆರವಣಿಗೆ ಉದ್ದಕ್ಕೂ ಝಾಂಜ್ ಪಥಕ, ಡೋಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯಗಳ ಸದ್ದು ಸಾಮಾನ್ಯವಾಗಿತ್ತು. ಈ ಸಂದರ್ಭದಲ್ಲಿ ಸಂಗನಗೌಡ ಪಾಟೀಲ, ದೇವಪ್ಪ ವರ್ದಿ, ಗದಿಗೆಯ್ಯ ಮಠದ, ಗುರುಶಾಂತಯ್ಯನವರ ಹಿರೇಮಠ, ಎಸ್.ಸಿ.ಹುಣಿಸಿಕಟ್ಟಿಮಠ, ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಶಿವಾನಂದ ಗುಡ್ಡಣ್ಣವರ, ಶಿವಪ್ಪ ಜಟ್ಟೇಪ್ಪನವರ, ದೇವಪ್ಪ ಗುಡ್ಡಣ್ಣವರ, ಈರಪ್ಪ ಉಳ್ಳಾಗಡ್ಡಿ, ಬಸಯ್ಯ ಮಠದ, ಶಿದ್ದಪ್ಪ ಭರಮಶೆಟ್ಟರ, ಗದಿಗೆಪ್ಪ ಕುಂಬಾರ, ವಾಸಣ್ಣ ಕುವಾರಕರ, ಶಿವಪ್ಪ ಚಕ್ರ ಸಾಲಿ, ಡಾಕಪ್ಪ ತಳವಾರ, ನಿಂಗಯ್ಯ ಹಿರೇಮಠ, ರಮೇಶ, ಹರೀಶ ದೊಡ್ಡಮನಿ ಸೇರಿದಂತೆ ಅಪಾರ ಭಕ್ತರು ಉಪಸ್ಥಿತರಿದ್ದರು.

Read All News