ಬ್ಯಾಡಗಿ: ದೇಶದಲ್ಲಿ ಕಾಡುತ್ತಿರುವ ಮಹಾಮಾರಿ ಕರೋನದಿಂದ ರಕ್ಷಿಸಿಕೊಳ್ಳಲು ಕೇಂದ್ರ ಹಾಗೂ ಸರ್ಕಾರದ ಆದೇಶದಂತೆ ಎಲ್ಲರೂ ಮಾಸ್ಕ ಧರಿಸುವುದು, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಕಡ್ಡಾಯವಾಗಿದ್ದು, ಸಾರ್ವಜನಿಕರು ನಿರ್ಲಕ್ಷ್ಯ ತೋರಿದಲ್ಲಿ ದಂಡ ಮಾಡಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಹೇಳಿದರು. ಈ ನಿಯಮವನ್ನು ಉಲ್ಲಂಗಣೆ ಮಾಡುತ್ತಿರುವ ಜನರಿಗೆ ಕಳೆದ ಮೂರು ದಿನಗಳಿಂದ ತಿಳಿವಳಿಕೆ ನೀಡುವ ಮೂಲಕ ಅವರಿಂದ ದಂಡ ವಸೂಲಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪೋಲಿಸ ಇಲಾಖೆ, ಆರೋಗ್ಯ ಇಲಾಖೆಯೊಂದಿಗೆ ಸ್ಥಳೀಯ ಸಂಸ್ಥೆ ಕೈಜೋಡಿಸುವ ಮೂಲಕ ಕರೋನ ಹರಡುವಿಕೆ ತಡೆಗಟ್ಟಲು ಶ್ರಮಿಸುತ್ತಿದೆ ಎಂದರು. ಈಗಾಗಲೇ ಮಾಸಣಗಿ ರಸ್ತೆ, ಬಸ್ ನಿಲ್ದಾಣ, ಹಳೆ ಪುರಸಭೆ, ಕಲಾಭನವ ರಸ್ತೆ, ಕದರಮಂಡಲಗಿ ಕ್ರಾಸ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ತೆರಳಿದ ಮುಖ್ಯಾಧಿಕಾರಿಗಳು ದಂಡ ವಸೂಲಿಗೆ ಮುಂದಾಗಿದ್ದಾರೆ. ಅ.6 ರಿಂದ 4 ಸಾ.ರೂ.ಗಳನ್ನು ವಸೂಲಿ ಮಾಡಲಾಗಿದೆ. ದಯವಿಟ್ಟು ಇನ್ನಾದರೂ ಸಾರ್ವಜನಿಕರು ಅಧಿಕಾರಿಗಳ ಸಲುವಾಗಿ ಮಾಸ್ಕ ಎನ್ನದೆ, ತಮ್ಮ ಕುಟುಂಬದ ಆರೋಗ್ಯ ರಕ್ಷಣೆ ಮಾಡಿಕೊಳ್ಳಿ ಎಂದು ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಇಂಜಿನೀಯರ ಹರೀಶಕುಮಾರ, ಪರಿಸರ ಅಭಿಯಂತರ, ಆರೋಗ್ಯ ನಿರೀಕ್ಷರು ರವಿಕೀರ್ತಿ, ಸಿಬ್ಬಂದಿಗಳಾದ ತಬಸುಮಾನ, ಮಹಾಂತೇಶ ಹಳ್ಳಿ ಉಪಸ್ಥಿತರಿದ್ದರು.