ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

  • 15 Jan 2024 , 5:03 AM
  • Haveri
  • 141

ಶಿಗ್ಗಾವಿ: ಪಟ್ಟಣದ ಶ್ರೀ ಜ.ರೇಣುಕಾ ಚಾರ್ಯ ಕೋ.ಆಪ್ ಕ್ರೇಡಿಟ್ ಸೊಸಾಯಿಟಿ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕೂಡಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ರೇಣುಕಾಚಾರ್ಯ ಬ್ಯಾಂಕಿನ ಅಧ್ಯಕ್ಷ ಡಾ.ಆರ್.ಎಸ್.ಅರಳೆಲೆಮಠ ಮಾತನಾಡಿ, ಪ್ರತಿವರ್ಷ ಸಂಘದ ಸದಸ್ಯರ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸರ್ವ ಸಂಘದ ಸದಸ್ಯರನ್ನು ಆಹ್ವಾನಿಸಿ ಅದ್ಧೂರಿಯಾಗಿ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್-19 ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಅತೀ ಸರಳವಾಗಿ ಆಚರಿಸಲಾಗುತ್ತಿದೆ. ಎಂದು ಹೇಳಿದರಲ್ಲದೇ ವಿದ್ಯಾರ್ಥಿಗಳು ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ಓದಿನ ಕಡೆ ಗಮನಹರಿಸಿ ಅಧ್ಯಯನ ಮಾಡಿದಾಗ ಮಾತ್ರ ಸಾಧಕರ ಸಾಲಿನಲ್ಲಿ ಬಂದು ನಿಲ್ಲಲು ಸಾದ್ಯ ಸಾಧನೆ ಎಂಬುದು ಸಾಧಕನ ಸೋತ್ತೇ ವಿನ: ಸೋಮಾರಿಗಳ ಸೋತ್ತಲ್ಲ ಎಂಬುದಕ್ಕೆ ಈ ವೇದಿಕೆಯಲ್ಲಿ ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ಈ ವಿದ್ಯಾರ್ಥಿಗಳೆ ಸಾಕ್ಷಿಯಾಗಿದ್ದಾರೆ. ಇವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಬ್ಯಾಂಕಿನ ಉಪಾಧ್ಯಕ್ಷ ಫಕ್ಕೀರಜ್ಜ ಯಲಿಗಾರ, ನಿರ್ದೇಶಕರಾದ ಭರಮಜ್ಜ ನವಲಗುಂದ, ನಾಗರಾಜ ಬ್ರಹ್ಮಾವರ, ವೀರಣ್ಣ ಬಡ್ಡಿ, ಕಲ್ಲಪ್ಪ ಹೆಸರೂರ, ಜಯಶ್ರೀ ಯಲಿಗಾರ, ಎಫ್.ಸಿ.ಪಾಟೀಲ, ದಿ.ಎಫ್.ಧಾರವಾಡ, ಬ್ಯಾಂಕ್ ಪ್ರಬಾರ ವ್ಯವಸ್ಥಾಪಕ ಸಿ.ಎಸ್.ಶ್ಯಾಬಣ್ಣವರ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read All News