ಬoಕಾಪುರ: ಸಮಿಪದ ಚಂದಾಪುರ ಗ್ರಾಮದಲ್ಲಿ ಕೋವಿಡ್‌ನಿಂದ ಲಿಂಗೈಕ್ಯರಾದ ಗ್ರಾಮದ ವಿರಕ್ತಮಠದ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳವರ ಭಾವಪೂರ್ಣ ಶ್ರದ್ಧಾಂಜಲಿ ಅಂಗವಾಗಿ ಶ್ರೀಗಳ ಭಾವಚಿತ್ರದ ಮೆರವಣಿಗೆ ಭಕ್ತ ಸಮೂಹದ ಮಧ್ಯ ಶ್ರದ್ಧಾ ಭಕ್ತಿಯಿಂದ ನಡೆಯಿತು. ಕೋವಿಡ್-19 ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶ್ರೀಗಳು ಚಿಕಿತ್ಸೆ ಫಲಕಾರಿಯಾಗದೆ ಅ.4 ರಂದು ಶಿವಾಧಿನರಾಗಿದ್ದರು. ಲಿಂಗೈಕ್ಯರಾದ ಶ್ರೀಗಳವರ ದರ್ಶನದಿಂದ ವಂಚಿತರಾಗಿದ್ದ ಭಕ್ತ ಸಮೂಹ, ಶ್ರದ್ಧಾ, ಭಕ್ತಿಯಿಂದ ಅವರ ಭಾವಚಿತ್ರದ ಮೇರವಣಿಗೆಯ ಅವರ ಬಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿ ಗೌರವ ಸಮರ್ಪಿಸಿದರು. ಶ್ರೀಗಳು ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಅಪಾರ ಭಕ್ತ ಸಮೂಹವನ್ನು ಹೊಂದಿದ್ದರು. ಲಿಂ.ಶ್ರೀಗಳು ಶ್ರೀಮಠಕ್ಕೆ ಭಕ್ತಿಯಿಂದ ಬಂದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರಮಾಡುವ ಶಕ್ತಿಯನ್ನು ಪಡೆದವರಾಗಿದ್ದರು. ಅಂತಹ ಮಹಾ ಪುರುಷರನ್ನು ಕಳೆದುಕೊಂಡ ಭಕ್ತ ಸಮೂಹ ಅನಾಥವಾಗಿದೆ ಎಂದು ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡೆಸಿದರು. ಶ್ರೀಗಳ ಬಾವಚಿತ್ರದ ಮೇರವಣಿಗೆ ಚಂದಾಪುರ, ಚಂದಾಪುರದ ತಾಂಡಾ, ನೀರಲಕಟ್ಟಿ ಗ್ರಾಮದಲ್ಲಿ ಸಂಚರಿಸಿ ಚಂದಾಪುರ ಗ್ರಾಮದ ವೀರಕ್ತಮಠದ ಆವರಣಕ್ಕೆ ಬಂದು ಸಮಾರೋಪಗೋಂಡಿತು. ಬಿಜೆಪಿ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಎಸ್.ಸಿ.ಹುಣಿಸಿಕಟ್ಟಿಮಠ, ಸಂಗನಗೌಡ ಪಾಟೀಲ, ದೇವಪ್ಪ ವರ್ದಿ, ಗದಿಗೆಯ್ಯ ಮಠದ, ಗುರುಶಾಂತಯ್ಯ ಹಿರೇಮಠ, ಶಿವಾನಂದ ಗುಡ್ಡಣ್ಣವರ, ಶಿವಪ್ಪ ಜಟ್ಟೇಪ್ಪನವರ, ದೇವಪ್ಪ ಗುಡ್ಡಣ್ಣವರ, ಈರಪ್ಪ ಉಳ್ಳಾಗಡ್ಡಿ, ಬಸಯ್ಯ ಮಠದ, ಶಿದ್ದಪ್ಪ ಭರಮಶೆಟ್ಟರ, ಗದಿಗೆಪ್ಪ ಕುಂಬಾರ, ವಾಸಣ್ಣ ಕುವಾರಕರ, ಶಿವಪ್ಪ ಚಕ್ರಸಾಲಿ, ಡಾಕಪ್ಪ ತಳವಾರ, ನಿಂಗಯ್ಯ ಹಿರೇಮಠ, ಹರೀಶ ದೊಡ್ಡಮನಿ ಸೇರಿದಂತೆ ಅಪಾರ ಭಕ್ತರು ಉಪಸ್ಥಿತರಿದ್ದರು.