ಹುಕ್ಕೇರಿ: ತಾಲೂಕಿನ ಯಮಕನಮರಡಿ ಕ್ಷೇತ್ರದ ಕರಗುಪ್ಪಿ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ರವಿವಾರ ದಿ. 11 ರಂದು ಜಿಲ್ಲಾ ಬಿಜೆಪಿ ಧುರೀಣ ಮಾರುತಿ ಅಷ್ಟಗಿ ಗ್ರಾಮದ ಯುವಕರೊಂದಿಗೆ ಸೇರಿಕೊಂಡು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನತೆಗೆ ಸ್ವಚ್ಛ ಕ್ಷೇತ್ರ ಅಭಿಯಾನಯದಡಿಯಲ್ಲಿ ಸ್ವಚ್ಛತೆ ಕುರಿತು ಪ್ರತಿಯೊಬ್ಬರಲ್ಲಿ ಅರಿವು ಮೂಡಿಸಲಾಗುವದು. ಸ್ವಚ್ಛ ಮಾಡಿದ ಸ್ಥಳದಲ್ಲಿ 15 ಸಸಿಗಳನ್ನು ನೆಟ್ಟು ಜನರಲ್ಲಿ ಪರಿಸರ ಕುರಿತು ಜಾಗೃತಿ ಮುಡಿಸಲಾಗುತ್ತಿದೆ. ಪ್ರತಿ ರವಿವಾರಕ್ಕೊಮ್ಮೆ ಕ್ಷೇತ್ರದ ಒಂದು ಹಳ್ಳಿಯನ್ನು ಆಯ್ಕೆ ಮಾಡಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವದು ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ. ಬಸವರಾಜ ರೇವಣ್ಣವರ, ಚಂದು ಮಠದ, ಸಂತೋಷ ಕುಲಕರ್ಣಿ, ಶಂಕರ ಪಾಯನ್ನವರ, ಮಲಗೌಡ ಪಾಟೀಲ, ದುರದುಂಡಿ ರೇವಣ್ಣವರ, ಕೆಂಪಯ್ಯ ಮಠದ, ಭೀಮರಾಯಿ ಹರಿಜನ ಹಾಗೂ ಗ್ರಾಮಸ್ಥರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.