ಮಾಜಿ ಸಚಿವ ಹೊರಟ್ಟಿಗೆ ಸವಾಲು ಹಾಕಿದ ಎಸ್.ವಿ. ಸಂಕನೂರ

  • 18 Dec 2023 , 1:34 AM
  • Haveri
  • 108

ರಾಣೇಬೆನ್ನೂರು: ಕೋವಿಡ್-19ರ ನಂತರದಲ್ಲಿಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ ಅನುದಾನಿತರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಸುಮಾರು25ಸಾವಿರ ರೂಗಳ ಪ್ಯಾಕೇಜ್ ನೀಡುವಂತೆಒತ್ತಾಯ ಮಾಡಲಾಗಿದೆಎಂದುಪಶ್ಚಿಮ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಎಸ್.ವಿ. ಸಂಕನೂರ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ 70ಸಾವಿರ ಮತಗಳಿದ್ದು. ಈ ಕ್ಷೇತ್ರಕ್ಕೆ ನಾನು ಹೊಸಬಲ್ಲ.40 ವರ್ಷಗಳಿಂದ ಜನರ ಸಂಪರ್ಕದಲ್ಲಿದ್ದೇನೆ. ಕಷ್ಟ ಸುಖದಲ್ಲಿಇದ್ದೇನೆ. ಕಳೆದ ಬಾರಿ ಗೆಲ್ಲಿಸಿ ಕೆಲಸ ಮಾಡಲು ಅವಕಾಶ ನೀಡಿದ್ದಾರೆ.ಈಗ ಎರಡನೇ ಭಾರಿ ಪ್ರಚಾರಕ್ಕೆ ಹೊರಟಿದ್ದೇನೆ. ಮಾಡಿರುವ ಕೆಲಸವನ್ನು ಪುಸ್ತಕದ ಮೂಲಕ ಮತದಾರರಿಗೆ ತಿಳಿಸುತ್ತಿದ್ದೇನೆ ಎಂದರು. ವಿಧಾನ ಪರಿಷತ್ ಸದಸ್ಯನಾಗಿಆಯ್ಕೆಯಾದ ನಂತರ ಶಿಕ್ಷಕರ ಹಾಗೂ ಪದವೀಧರರ ಸಮಸ್ಯೆಗಳ ಕುರಿತು ಸದನದಲ್ಲಿ ಪ್ರಶ್ನೆ ಮಾಡಿದ್ದೇನೆ. ಸದನದಲ್ಲಿ ನಿರಂತರಧರಣಿ ಮಾಡುವ ಮೂಲಕ ಸರ್ಕಾರಕ್ಕೆ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿಲಾಗಿದೆ. ಪರಿಷತ್ ಸದಸ್ಯನಾದ ನಂತರದಲ್ಲಿ ನಮ್ಮ ಮತ ಕ್ಷೇತ್ರದಲ್ಲಿ ಧಾರವಾಡದಲ್ಲಿ ಎರಡು, ಗದಗ, ಹಾವೇರಿ ಹಾಗೂ ಕಾರವಾರದಲ್ಲಿ ಒಟ್ಟು 5 ಬಾರಿ ಉದ್ಯೋಗ ಮೇಳ ನಡೆಸುವ ಮೂಲಕ ಒಂದುಉದ್ಯೋಗ ಮೇಳದಲ್ಲಿ ಕನಿಷ್ಠ 500 ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಾಗಿದೆ. ಹೊರಟ್ಟಿ ಸಂವಾದಕ್ಕೆ ಸಿದ್ದ: ಶಿಕ್ಷಕರ ಹಾಗೂ ಪದವೀಧರರ ಸಮಸ್ಯೆಗಳಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಸ್ಪಂದಿಸಿಲ್ಲ.

ಜೆಡಿಎಸ್ ಸರ್ಕಾರಅವರ ಸಮಸ್ಯೆಗಳಿಗೆ ಸ್ಪಂದಿಸಿದೆ. ಬೇಕಾದರೆ ಸಂವಾದ ಏರ್ಪಡಿಸಿದರೆ ನಾನು ಸಿದ್ದನಿದ್ದೇನೆ ಎಂದು ಹೇಳಿಕೆ ನೀಡಿರುವ ಮಾಜಿ ಸಚಿವ ಹೊರಟ್ಟಿ ಅವರಿಗೆ ಸವಾಲು ಹಾಕಿದ ಸಂಕನೂರ ಅವರು, ಹೊರಟ್ಟಿ ಅವರು ಸಂವಾದ ನಡೆಸುವ ಸ್ಥಳ ಹಾಗೂ ದಿನಾಂಕವನ್ನು ನಿಗದಿಪಡಿಸಿದರೆ ನಾನು ಸಂವಾದಕ್ಕೆ ಹಾಜರಾಗಿ ನಾನು ಮಾಡಿರುವ ಕೆಲಸದ ಕುರಿತು ದಾಖಲೆ ಸಮೇತ ಉತ್ತರ ನೀಡುತ್ತೇನೆ ಎಂದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಬಿಜೆಪಿ ನಗರ ಘಟಕದ ಅಧ್ಯಕ್ಷ ದೀಪಕ ಹರಪನಹಳ್ಳಿ, ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಕೇಲಗಾರ, ಬಿಜೆಪಿ ಮುಖಂಡರಾದ ಡಾ.ಬಸವರಾಜ ಕೇಲಗಾರ, ರಾಜಣ್ಣ ಪಾಟೀಲ, ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ, ಅನಿಲ ಸಿದ್ದಾಳಿ, ಬಸವರಾಜ ಹುಲ್ಲತ್ತಿ, ರಾಘು ಕುಲಕರ್ಣಿ, ರಮೇಶ ಗುತ್ತಲ ಸೇರಿದಂತೆ ಮತ್ತಿತರು ಇದ್ದರು.

Read All News