ಬಂಕಾಪುರ : ರಾಷ್ಟಿಯ ಹೇದ್ದಾರಿ-4 ರಿಂದ ಬಂಕಾಪುರ ಪಟ್ಟಣಕ್ಕೆ ಪ್ರವೇಶವಾಗುವ ಕಾರವಾರ ಇಳಕಲ್ ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಜೀವ ಭಯದಲ್ಲಿ ಪ್ರಯಾಣಿಸುವಂತಾಗಿದೆ. ಸೋಮವಾರ ಸಂಜೆ ಬೈಕ್ ಸವಾರನೋರ್ವ ರಸ್ತೆಯ ಮಧ್ಯದಲ್ಲಿರು ಗುಂಡಿಗೆ ಸಿಲುಕಿ ಅಫಘಾತಕ್ಕೀಡಾಗಿ ತೀವೃ ಘಾಯಗೋಂಡು ಸ್ಥಳೀಯ ಪೊಲೀಸರ ಸಹಾಯದೋಂದಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತಾಗಿದೆ. ಇದು ಒಂದು ದಿನದ ಮಾತಲ್ಲ. ಪ್ರತಿ ದಿನ ಹೆಚ್ಚಾಗಿ ರಾತ್ರಿಹೋತ್ತಿನಲ್ಲಿಯೇ ಇಂತಹ ಅವಗಡಗಳು ಸಂಬವಿಸುತ್ತಲಿವೆ. ಇದಕ್ಕೇಲ್ಲಾ ರಸ್ತೆಗಳಲ್ಲಿ ಆಳವಾಗಿಬಿದ್ದ ಕಂದಕಗಳೇ ಕಾರಣವಾಗಿವೆ. ಬೈಕ್ ಮೇಲೆ ತೆರಳುತ್ತಿರುವ ಎಷ್ಟೋ ಕುಟುಂಬಗಳು ಇಲ್ಲಿ ಬಿದ್ದು ಘಾಯಗೋಂಡಿದ್ದಾರೆ. ಇದಕ್ಕೆ ಸಂಬAದಪಟ್ಟ ಅಧಿಕಾರಿಗಳ ನಿರ್ಲಕ್ಸವೇ ಕಾರಣವಾಗಿದೆ ಎಂದು ಸ್ಥಳೀಯರ ಆರೋಪವಾಗಿದೆ. ಸವಣೂರ ಕ್ರಾಸ್‌ನಿಂದ ಪಟ್ಟದೋಳಗೆ ಬರುವ ರಾಜ್ಯ ಹೆದ್ದಾರಿ ಹಾಗು ಮುಂಡಗೋಡ ಕ್ರಾಸ್ ನಿಂದ ಹಾವೇರಿಗೆ ಸಂಚರಿಸುವ ರಸ್ತೆಯಲ್ಲಿ ಆಳವಾದ ತೆಗ್ಗು, ಗುಂಡಿಗಳು ಬಿದ್ದು, ಒಂದಿಲ್ಲೋAದು ಅಪಘಾತಗಳು ಸಂಭವಿಸಿ ಬೈಕ್ ಸವಾರರು ಆಸ್ಪತ್ರೆ ಸೇರುವಂತಾಗಿದೆ. ರಸ್ತೆಯ ಮಧ್ಯದಲ್ಲಿ ಗುಂಡಿಗಳೋ... ಅಥವಾ ಗುಂಡಿಗಳ ಮಧ್ಯದಲ್ಲಿ ರಸ್ತೆ ಇದಿಯೋ ಎಂಬುದು ವಾಹನ ಸವಾರರಿಗೆ ತಿಳಿಯದೇ ಗುಂಡಿಗಳ ಮಧ್ಯದಲ್ಲಿ ರಸ್ತೆಯನ್ನು ಹುಡುಕುತ್ತಾ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದುಕೋಂಡು ಸಂಬAಧಿಸಿದ ಅಧಿಕಾರಿಗಳಿಗೆ ಚೀ....ಥೂ... ಎಂದು ಶಾಪಹಾಕುತ್ತಾ ಸಾಗುವಂತ ದುಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲವಾಗಿದ್ದರಿಂದ ರಸ್ತೆಯಲ್ಲಿರುವ ಗುಂಡಿಗಳು ಜಲಾವೃತಗೋಂಡು ರಸ್ತೆ ಸಮತಟ್ಟಾಗಿ ಕಾಣುವದರಿಂದ ರಬಸವಾಗಿ ಬರುವ ಬೈಕ್ ಸವಾರರು ಗುಂಡಿಗಳಿಗೆ ಸಿಲುಕಿ ಬ್ಯಾಲೆನ್ಸ್ ಕಳೆದುಕೋಂಡು ಅಫಘಾತಕ್ಕೀಡಾಗುತ್ತಿದ್ದಾರೆ. ಇದರಿಂದ ನಿಗದಿತ ಗುರಿ ಇಟ್ಟುಕೋಂಡು ಕೇಲಸ ಕಾರ್ಯಗಳಿಗೆ ತೆರಳುವ ವಾಹನ ಸವಾರರು ಕೈ ಕಾಲು ಮುರಿದುಕೋಂಡು ಆಸ್ಪತ್ರೆ ಸೇರುವಂತಾಗಿದೆ. ಪ್ರತಿದಿನ ಈ ರಸ್ತೆಯ ಮೂಲಕವೇ ಸಂಚರಿಸುವ ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಣೀದ್ದು ಕುರುಡರಾಗಿ ವರ್ತಿಸುತ್ತಿರುವುದಕ್ಕೆ ವಾಹನ ಸವಾರರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕೋಟ: ಕಣ್ಣಿಗೆ ಮಣ್ಣು : ಕಾರವಾರ ಇಳಕಲ್ ರಾಜ್ಯ ಹೆದ್ದಾರಿಯಾಗಿರುವುದರಿಂದ ಈ ರಸ್ತೆಯಮೂಲಕ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಲಿವೆ.
ಇದರಿಂದ ರಸ್ತೆಗಳು ಹಾಳಾಗುತ್ತಿದ್ದು, ಲೋಕೋಪಯೋಗಿ ಅಧಿಕಾರಿಗಳು ಈ ರಸ್ತೆಗೆ ಶಾಸ್ವತ ಪರಿಹಾರ ಕಲ್ಪಿಸದೇ ಕೆಂಪು ಗೋರ್ಚಿನಿಂದ ಗುಂಡಿಗಳನ್ನು ಮುಚ್ಚಿ ಬೀಗುತ್ತಿದ್ದಾರೆ. ಈ ಗೋರ್ಚು ಕೇವಲ ಎರಡೇ ದಿನದಲ್ಲಿ ಕಿತ್ತುಹೋಗಿ ಗುಂಡಿಗಳು ಎತಾಸ್ಥಿತಿ ಕಾಯ್ದುಕೋಳ್ಳುತ್ತಿವೆ. ಇದರಿಂದ ರೋಸಿಹೋದ ವಾಹನ ಸವಾರರು ಅಧಿಕಾರಿಗಳಿಗೆ ವಾಹನ ಸವಾರರ ಕಣ್ಣಿಗೆ ಮಣ್ಣೇರೆಚುವದನ್ನು ಬಿಟ್ಟು ರಾಜ್ಯ ಹೆದ್ದಾರಿಗೆ ಶಾಸ್ವತ ಪರಿಹಾರ ಕಲ್ಪಿಸಿ ಸುಗಮ ಸಂಚಾರಕ್ಕೆ ಅನುಕುಲ ಮಾಡಿಕೋಡಬೇಕೇನ್ನುವುದೇ ವಾಹನ ಸವಾರರ ಒತ್ತಾಯವಾಗಿದೆ.
ಪ್ರತಿದಿನ ಒಂದಿಲ್ಲೋoದು ಬೈಕ್ ಅಫಘಾತಗಳು ಸಂಭವಿಸುತ್ತಲೇ ಇವೆ. ರಸ್ತೆಯ ಪರಿಚಯ ವಿಲ್ಲದ ಬೈಕ್ ಸವಾರರು ಗುಂಡಿಗಳಿಗೆ ಸಿಲುಕಿ ಅಫಘಾತಕ್ಕೀಡಾಗುತ್ತಿದ್ದಾರೆ. ಅಫಘಾತಕ್ಕೀಡಾದ ವಾಹನ ಸವಾರರನ್ನು ಆಸ್ಪತ್ರೆಗೆ ಸಾಗಿಸುವುದೇ ನಮಗೆ ದಿನನಿತ್ಯದ ಕಾಯಕಗಳಲ್ಲೋಂದಾಗಿದೆ. ಮಾನಸಿಂಗ್ ಬಾಬುಸಿಂಗನವರ ಫ್ರೇಂಡ್ಸ್ ದಾಬಾ ಮಾಲಕರು.