ರೈತರ ಕಾಮಧೇನು ದೇಶಿ ಆಕಳುಗಳ ಉಳಿವಿಗಾಗಿ ಅಭಿಯಾನ: ಸುಜಿತ ಹುಕ್ಕೇರಿಕರ

  • 14 Jan 2024 , 11:25 PM
  • Belagavi
  • 249

ಹುಕ್ಕೇರಿ: ತಾಲೂಕಿನ ಇಸ್ಲಾಂಪೂರ ಗ್ರಾಮದ ವಿಠ್ಠಲ ಮಂದಿರದಲ್ಲಿ ಮಂಗಳವಾರ ದಿ.14 ರಂದು ರೈತರ ಕಾಮಧೇನು ದೇಶಿ ಆಕಳುಗಳ ಉಳಿವಿಗಾಗಿ ಅಭಿಯಾನ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾವಯವ ಕೃಷಿ ಆಯೋಗದ ರಾಷ್ಟ್ರೀಯ ಸದಸ್ಯ ಸುಜಿತ ಹುಕ್ಕೇರಿಕರ ಮಾತನಾಡಿ, ನಮ್ಮ ದೇಶದ ಜನ ದೇಶಿ ತಳಿಯ ಆಕಳುಗಳನ್ನು ಕಾಮಧೇನುವಿನ ರೂಪದಲ್ಲಿ ಕಾಣುತ್ತೇವೆ. ಆದರೆ ಇತ್ತಿಚಿನ ದಿನಗಳಲ್ಲಿ ಜವಾರಿ ಆಕಳುಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ವಿಷಾದನೀಯ ಸಂಗತಿ. ಜವಾರಿ ಆಕಳು ಸಾಕುವುದರಿಂದ ತುಂಬಾ ಉಪಯೋಗವಿದೆ. ಆಕಳು ಸಗಣಿ, ಗೋಮೂತ್ರ, ತುಪ್ಪ, ಹಾಲು, ಮೊಸರಿನಲ್ಲಿ ಅನೇಕ ರೀತಿಯ ಔಷಧಿ ಗುಣಗಳನ್ನು ಹೊಂದಿದ್ದು ಮುಂಬರುವ ದಿನಗಳಲ್ಲಿ ಸಾವಯವ ಪದಾರ್ಥಗಳ ಬೇಡಿಕೆ ಹೆಚ್ಚುವ ಎಲ್ಲ ಲಕ್ಷಣಗಳಿವೆ. ಆದ್ದರಿಂದ ಗ್ರಾಮೀಣ ರೈತರು ದೇಶಿ ಆಕಳು ಸಾಕಾಣಿಕೆ ಮಾಡಿ ಸ್ವಾವಲಂಬನೆ ಜೀವನ ನಡೆಸಬೇಕಾಗಿದೆ ಎಂದು ಜನರಲ್ಲಿ ಪ್ರಜ್ಞೆ ಮೂಡಿಸಿದರು. ಹಾಗೂ ದೇಶಿ ಆಕಳುಗಳನ್ನು ಸಾಕುತ್ತಿರುವ ರೈತರನ್ನು ಪ್ರೋತ್ಸಾಹಿಸಿ ಅವರನ್ನು ಸತ್ಕರಿಸಿದರು.

logintomyvoice

ನಂತರ ಗ್ರಾಮದ ದೇವಸ್ಥಾನದ ಸದ್ಭಕ್ತ ಮಂಡಳಿಯ ಭರಮೋಜಿ ಚಿಕ್ಕೋಡಿ, ರಾಜು ನಾಶಿಪುಡಿ, ಸದಾಶಿವ ಕಲ್ಲಟ್ಟಿ, ರಾಮ ಕೊತಗಿ, ಶಂಕರ ಹುಬ್ಬನ್ನವರ, ಶಿವಪ್ಪ ಭಾಗರಾಯಿ, ವಿಠ್ಠಲ ಭಜನಾ ಮಂಡಳಿ,ಅಡವಿಸಿದ್ದೇಶ್ವರ ಭಜನಾ ಮಂಡಳಿಯವರು, ಸುಜಿತ ಹುಕ್ಕೇರಿಕರ ಮತ್ತು ಸಮಾಜ ಸೇವಕರಾದ ಸೋಮಶೇಖರ ಹೊರಕೇರಿ ಇವರನ್ನು ದೇವಸ್ಥಾನದ ವತಿಯಿಂದ ಸತ್ಕರಿಸಲಾಯಿತು.

Read All News