1411 ಕೊರೊನಾ ಶಂಕಿತರ ವರದಿಗಳ ನಿರೀಕ್ಷೆಯಲ್ಲಿ ಜಿಲ್ಲಾಡಳಿತ, ಮತ್ತೆ ಬೆಳಗಾವಿಗೆ ಮಹಾರಾಷ್ಟ್ರ ನಂಜಿನ ಆತಂಕ

  • 15 Jan 2024 , 2:15 AM
  • Belagavi
  • 85
ಬೆಳಗಾವಿ: ಕುಂದಾನಗರಿ ಬೆಳಗಾವಿ ಜಿಲ್ಲೆಗೆ ಮತ್ತೆ ಮಹಾರಾಷ್ಟ್ರ ನಂಜಿನ ಆತಂಕ ಉಂಟಾಗಿದೆ. ಇಂದು ಬೆಳಗಾವಿ ಜಿಲ್ಲಾಡಳಿತ 1411 ಕೊರೊನಾ ಶಂಕಿತರ ವರದಿಗಳ ನಿರೀಕ್ಷೆಯಲ್ಲಿದೆ. ಸದ್ಯ ಜಿಲ್ಲೆಯಲ್ಲಿ ಸದ್ಯ 97 ಸಕ್ರಿಯ ಕೊರೊನಾ ಪಾಸಿಟಿವ್ ಪ್ರಕರಣಗಳು ಇವೆ. ಜಿಲ್ಲೆಯಲ್ಲಿ ಈವರೆಗೂ 14,555 ಜನರ ಮೇಲೆ‌ ನಿಗಾ ಇಡಲಾಗಿದೆ. ಜೊತೆಗೇ ಒಟ್ಟು 5433 ಜನರಿಗೆ 14 ದಿನಗಳ ಕಾಲ ಹೋಮ್ ಕ್ವಾರಂಟೈನಲ್ಲಿದ್ದು, ಒಟ್ಟು 2000 ಜನರಿಗೆ 14 ದಿನಗಳ ಹೋಮ್ ಕ್ವಾರಂಟೈನ್ ಹಾಗೂ 7025 ಜನರು 28 ದಿನಗಳ ಹೋಮ್ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. ಒಟ್ಟು 13,259 ಜನರ ಥ್ರೋಟ್ ಸ್ವ್ಯಾಬ್ ಪ್ರಯೋಗಾಲಯಕ್ಕೆ ರವಾನೆಯಾಗಿದೆ ಈವರೆಗೂ 216 ಕೊರೊನಾ‌ ಪಾಸಿಟಿವ್ ಕೇಸ್ ಪತ್ತೆ ಆಗಿದ್ದು ಓರ್ವ ವೃದ್ಧೆ ಸಾವನಪ್ಪಿದ್ದಾಳೆ ಒಟ್ಟು 126 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. 11442 ಜನರ ವರದಿ ಕೊರೊನಾ ನೆಗೆಟಿವ್ ಇದ್ದು, ಇಂದು 1411 ಜನರ ವರದಿ ನಿರೀಕ್ಷೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಇದೆ.

Read All News