ಮೈಸೂರು: ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಯೋವೃದ್ದರು, ವಿಧವೆಯರು, ಅಂಗವಿಲಕರು ಸೇರಿದಂತೆ ಸುಮಾರು 48 ಜನ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಮಾಸಿಕ ಪಿಂಚಣಿ ಆದೇಶಗಳನ್ನು ಶಾಸಕರಾದ ಎಲ್. ನಾಗೇಂದ್ರರವರು ವಿತರಿಸಿದರು, ಈ ಸಂಧರ್ಭದಲ್ಲಿ ರಾಜಸ್ವ ನಿರೀಕ್ಷಕ ಮಹೆಂದ್ರ, ಚಾಮರಾಜ ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಮಹೇಶ್, ಮುಖಂಡರಾದ ಎಲ್. ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.