ವಿಶ್ವವಿಖ್ಯಾತ ಮೈಸೂರಿನ ದಸರಾ ಮಹೋತ್ಸವಕ್ಕೆ ಚಾಲನೆ

  • 14 Jan 2024 , 11:32 PM
  • Mysuru
  • 166

ಮೈಸೂರು: ವಿಶ್ವವಿಖ್ಯಾತ ಮೈಸೂರಿನ ದಸರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಇಂದು ಮುಂಜಾನೆ ಬ್ರಾಹ್ಮಿ ಶುಭ ಮುಹೋರ್ತದಲ್ಲಿ ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಕೊರೋನಾ ವಾರಿಯರ್ ಆದ ಡಾ.ಸಿಎನ್ ಮಂಜುನಾಥ್ ರವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚೆನೆಗೈಯುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಚಾಮುಂಡೇಶ್ವರಿ ತಾಯಿಗೆ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆಗಳು ನಡೆದವು ದೇಗುಲದಿಂದ ಹೊರಗಿರುವ ಬೆಳ್ಳಿಯ ರಥದಲ್ಲಿ ನಾಡ ಅಧಿದೇವತೆಯನ್ನು ಪ್ರತಿಷ್ಠಾಪಿಸಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸೇರಿದಂತೆ ಎಲ್ಲಾ ಗಣ್ಯರು ಪಷ್ಪಾರ್ಚನೆಗೈದ್ಯರು.

logintomyvoice

ಕೊರೋನ, ಜಲಪ್ರಳಯ ನಿವಾರಣೆಗೆ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಮಾತನಾಡಿದ ಸಿಎಂ ಬಿ ಎಸ್ ವೈ, ನಾಡಿನ ಜನತೆಗೆ ದಸರಾ ಶುಭಾಶಯಗಳನ್ನು ತಿಳಿಸಿ ಕೊರೋನಾ ಕಾರಣ ಸಾಂಪ್ರದಾಯಿಕ ಹಬ್ಬಗಳನ್ನ ಭಯಭಕ್ತಿಯಿಂದ ಆಚರಿಸೋಣ ಈ ಮಹಾಮಾರಿಯ ವಿರುದ್ದ ಸಂಘಟನಾತ್ಮಕವಾಗಿ ಹೋರಾಡಿ ಜಯ ಗಳಿಸಬೇಕಿದೆ ಸರ್ಕಾರಿ ಸಂಸ್ಥೆಯೊoದನ್ನ ತಮ್ಮ ಸಂಸ್ಥೆ ಎಂದೇ ಭಾವಿಸಿ ಚೆನ್ನಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂದರು.

Read All News