ಕಾಂಪೌoಡ್ ನಿರ್ಮಾಣಕ್ಕೆ ಭೂಮಿಪೂಜೆ

  • 15 Jan 2024 , 2:07 AM
  • Haveri
  • 108

ಶಿಗ್ಗಾವಿ: ಪಟ್ಟಣದ ಶ್ರೀ ಬ.ಬು. ಮಾಮಲೆ ದೇಸಾಯಿ ಶಾಲೆಯ ಸುತ್ತ ಕಾಂಪೌAಡ್ ನಿರ್ಮಾಣಕ್ಕೆ ಶಿಗ್ಗಾಂವ ತಾಲೂಕು ಶಿಕ್ಷಣ ಸಮಿತಿ ಉಪಾಧ್ಯಕ್ಷ ದತ್ತಣ್ಣ ವೇರ್ಣೇಕರ್ ಶನಿವಾರ ಭೂಮಿಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು ಶ್ರೀ ಬ.ಬು. ಮಾಮಲೆ ದೇಸಾಯಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ನಡೆಯುತ್ತಿರುವ ಕಾಂಪೌAಡ್ ನಿರ್ಮಾಣ ಕಾಮಗಾರಿ ಅಭಿನಂದನೀಯ. ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ತಾವು ಕಲಿತ ಶಾಲೆಯ ಅಭಿವೃದ್ಧಿಗೆ ಕೈಜೋಡಿಸುತ್ತಿರುವುದು ಶಾಲಾ ಆಡಳಿತ ಮಂಡಳಿಗೆ ಹರ್ಷ ತಂದಿದೆ. ಎಂದರು. ಶಿಗ್ಗಾಂವ ತಾಲೂಕು ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಪಿ. ಜೋಶಿ, ಆಡಳಿತ ಮಂಡಳಿ ಸದಸ್ಯರಾದ ಶಿವಪ್ಪ ಚಿನ್ನಪ್ಪನವರ, ಈರಣ್ಣ ಅಂಕಲಕೋಟಿ, ಶಂಭುಲಿAಗಪ್ಪ ರಾಮಗೇರಿ, ಭೀಮಣ್ಣ ಖುರ್ಷಾಪುರ, ಪ್ರಾಂಶುಪಾಲ ಆರ್.ಎಸ್.ಭಟ್, ಎಸ್.ಪಿ. ಬಳ್ಳಾರಿ, ಪೂಜಾ, ಕೆ.ಬಿ.ಚನ್ನಪ್ಪ, ಎನ್.ಎಸ್. ಹಾವಣಗಿ, ಕೆ.ಎಸ್. ದಳವಾಯಿ, ಆರ್.ಎಫ್. ಹಳ್ಯಾಳ, ಬಿ.ಎಚ್. ಬಣಕಾರ, ಎಸ್.ವೈ. ಅಥಣಿ, ಜೆ.ಎಂ. ಉಜನಿ, ಜಿ.ಎನ್. ಮಾದರ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ದೇಶಪಾಂಡೆ, ರಾಜಶೇಖರ ಹೆಸರೂರ, ಕುಮಾರಗೌಡ ಪಾಟೀಲ, ಪ್ರಕಾಶ ಔಂದಕರ್, ಗೂಳಪ್ಪ ಅರಳಿಕಟ್ಟಿ ಉಪಸ್ಥಿತರಿದ್ದರು.

Read All News