ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿ.ಯಕ್ಸಂಬಾ 50ನೇ ನೂತನ ಶಾಖೆಯ ಉದ್ಘಾಟನೆ

  • 14 Jan 2024 , 11:11 PM
  • Vijayapur
  • 179

ವಿಜಯಪುರ: ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಅವರ 58ನೇ ಹುಟ್ಟು ಹಬ್ಬದ ಪ್ರಯುಕ್ತ, ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿ.ಯಕ್ಸಂಬಾ ಇದರ 50ನೇ ನೂತನ ಶಾಖೆಯ ಉದ್ಘಾಟನೆ ಕಾರ್ಯಕ್ರಮ ನೇರವೆರಿತು. ನೂತನ ಶಾಖೆಯ ಉದ್ಘಾಟನೆಯನ್ನು ಶ್ರೀ.ಪ. ಪೂ. ಶ್ರೀ ಬಸವಲಿಂಗ ಮಹಾಸ್ವಾಮಿಗಳು ನೇರವೆರಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಬಸವಪ್ರಸಾದ ಜೊಲ್ಲೆ ಸಮಾಜ ಸೇವೆಯೇ ದೇವರ ಸೇವೆ, ಸಮಾಜದ ಪ್ರಗತಿಗೆ ಕಿರು ಕಾಣಿಕೆ ನೀಡುವುದು ನಮ್ಮ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಆರ್ಥಿಕ ಕ್ಷೇತ್ರ ಅಭ್ಯುದಯವಾಗಲು ನಾವು ಪಣ ತೊಡುತ್ತಿದ್ದೇವೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಊರಿನ ಹಿರಿಯರು, ಮುಖಂಡರು ಉಪಸ್ಥಿತರಿದ್ದರು.

Read All News