ಮಹಾಮಳೆಗೆ ಭೀಮಾನದಿ ತೀರದ ಜನ ಜೀವನ ತತ್ತರ, ಇನ್ನೂ ಹಾಯಿಸದ ಸರ್ಕಾರದ ಚಿತ್ತ

  • 15 Jan 2024 , 12:52 AM
  • Vijayapur
  • 137

ವಿಜಯಪುರ: ಪಶ್ಚಿಮಘಟ್ಟ ಮಹಾರಾಷ್ಟ್ರದ ರಾಜ್ಯದಲ್ಲಿ ಅಧಿಕ ಮಳೆಯಾಗುತ್ತಿರುವ ಈ ಹಿನ್ನಲೆಯಲ್ಲಿ ಜಿಲ್ಲೆಯ ಇಂಡಿ ಪಟ್ಟಣ ಸಮೀಪದ ಹಿಂಗಣಿ ಗ್ರಾಮದ ನದಿ ತೀರದಲ್ಲಿರುವ ಜನರ ಜೀವನ ಅಸ್ತವ್ಯಸ್ತವಾಗಿದೆ. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ಭೀಮಾನದಿಗೆ ನೀರು ಬಿಡುಗಡೆ ಮಾಡಿದ್ದರಿಂದ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ನದಿ ತೀರದ ಗ್ರಾಮಗಳು ಜಲಾವೃತಗೊಂಡಿವೆ ಇದರಿಂದಾಗಿ ಜನರು ಅಂಗೈಯಲ್ಲಿ ಜೀವ ಹಿಡಿದು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದು ಕಡೆ ರೈತರ ಬೆಳೆದ ಬೆಳೆ ಸಂಪೂರ್ಣ ನೀರು ಪಾಲಾಗಿದೆ. ಇಷ್ಟಾದರೂ ಸರ್ಕಾರ ಕಣ್ಣು ತೆರೆದು ನೋಡುತ್ತಿಲ್ಲ, ಯಾವುದೇ ರೀತಿಯ ಪರಿಹಾರ ಕ್ರಮ ಕೈಗೊಂಡಿಲ್ಲ ಎಂಬುವುದು ಜನರ ಕೂಗಾಗಿದೆ ಇನ್ನಾದರೂ ಸರ್ಕಾರ ಇತ್ತ ಗಮನಿಸಿ ಪರಿಹಾರ ಒದಗಿಸಬೇಕೆಂಬುದು ಜನರ ನಿಲುವಾಗಿದೆ.

Read All News