ಯಮಕನಮರಡಿ: ಗ್ರಾಮದ ಜ್ವಲಂತ ಸಮಸ್ಯಗಳಿಗೆ ಸ್ಪಂದಿಸಿ ಯುವಕ ಸಂಘಟನೆಗಳ ಸಮಾಜಮುಖಿಯಾಗಿ ರಚನಾತ್ಮಕ ಕಾರ್ಯ ಮಾಡಲು ಮುಂದಾಗಬೇಕೆAದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಶನಿವಾರ ದಿ. 17 ರಂದು ಚಿಲಬಾಂವಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮಿಕಿ ಯುವ ಬ್ರಿಗೇಡ್ (ರಿ) ಉದ್ಘಾಟಿಸಿ ಮಾತನಾಡಿದರು. ಇತ್ತಿಚೆಗೆ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಯುವಕರು ಪ್ರಕೃತಿ ವಿಕೋಪದಲ್ಲಿ ತೊಂದರೆಗೊಳಗಾದ ಜನರಿಗೆ ಸಹಾಯ ಸಹಕಾರ ಮಾಡಬೇಕು. ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಯುವ ಸಂಘಟನೆಯನ್ನು ಪ್ರಗತಿಯತ್ತ ಕೊಂಡಯ್ಯಬೇಕೆAದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಮಂಜುನಾಥ ಪಾಟೀಲ, ಶ್ರೀ ಮಹರ್ಷಿ ವಾಲ್ಮಿಕಿ ಯುವ ಬ್ರಿಗೇಡ್ ರಾಜ್ಯಾದ್ಯಕ್ಷ ಬಾಳೇಶ ದಾಸನಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯುವರಾಜ ತಳವಾರ, ಗ್ರಾಮದ ಹಿರಿಯರಾದ ಭೀಮಪ್ಪ ಹೊಳೆನ್ನವರ, ರಾಮಪ್ಪ ಮಗದುಮ್ಮ, ಸಾತಪ್ಪ ಕಟಾಬಳ್ಳಿ, ಅಶೋಕ ಕಲ್ಲಟ್ಟಿ ಹಾಗೂ ಶ್ರೀ ಮಹರ್ಷಿ ವಾಲ್ಮಿಕಿ ಯುವ ಬ್ರಿಗೇಡ ಚಿಲಭಾಂವಿ ಇದರ ಅಧ್ಯಕ್ಷ ಮಾರುತಿ ಕಟಾಬಳಿ, ಉಪಧ್ಯಾಕ್ಷ ದುಂಡಪ್ಪ ಪೂಜೇರಿ, ಕಾರ್ಯದರ್ಶಿ ಮಲ್ಲೇಶ ಸಜಲಿ, ಖಜಾಂಚಿ ಪರಶುರಾಮ ಕಲ್ಲಟ್ಟಿ, ಪ್ರಧಾನ ಕಾರ್ಯದರ್ಶಿ ಮಾರುತಿ ಸನದಿ, ಸದಸ್ಯರಾದ ಬಾಳೇಸ ಮಗದುಮ್ಮ, ಶ್ರೀಕಾಂತ ಕಟಾಬಳಿ, ಭೀಮಶಿ ಸನದಿ, ಸಂತೋಷ ಸನದಿ, ಸಿದ್ದಪ್ಪ ಪೂಜೇರಿ ಮತ್ತು ಪಾಶ್ಚಾಪೂರ ಗ್ರಾಮದ ಇರಫಾನ ದೇಸಾಯಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಕ್ಷಕ ಎಮ್ ಎನ್ ಮಗದುಮ್ಮ ಕಾರ್ಯಕ್ರಮ ನಿರೂಪಿಸಿದರು.