ನೆರೆ ಸಂತ್ರಸ್ಥರ ಸಂಕಷ್ಟ ನಿವಾರಣೆ ನನ್ನ ಜವಾಬ್ದಾರಿ: ಸಚಿವೆ ಶಶಿಕಲಾ ಜೊಲ್ಲೆ

  • 15 Jan 2024 , 12:50 AM
  • Vijayapur
  • 182

ವಿಜಯಪುರ: ಚಡಚಣ ತಾಲೂಕಿನ ಉಮರಾಣಿ ಗ್ರಾಮಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿ ಪರಿಶೀಲಿಸಿದರು. ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗೂ ಭೀಮಾ ನದಿ ಪ್ರವಾಹದಿಂದ ಹಾನಿಗೊಳಗಾದ ನೆರೆ ಪೀಡಿತ ಪ್ರದೇಶಗಳಿಗೆ ಮತ್ತು ಸಂತ್ರಸ್ತರ ಕೇಂದ್ರಕ್ಕೆ ತೆರಳಿ ಅವರೊಂದಿಗೆ ಸಮಾಲೋಚನೆ ನಡೆಸಿ ನೆರೆ ನೀರು ನುಗ್ಗಿದ ಮನೆ, ಹಾನಿಗೊಳಗಾಗಿರುವ ಸಂತ್ರಸ್ತರಿಗೆ ತುರ್ತಾಗಿ 2 ದಿನಗಳಲ್ಲಿ, 10,000 ರೂ. ಪರಿಹಾರ ಘೋಷನೆ ಮಾಡಿದರು. ಪರಿಹಾರ ಕೇಂದ್ರಗಳಲ್ಲಿ, ನೆರೆ ಸಂತ್ರಸ್ತರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ಮುತುವರ್ಜಿ ವಹಿಸಲು ಸಂಬAಧಿಸಿದ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ ಧಾರಾಕಾರ ಮಳೆ ಹಾಗೂ ಭೀಮಾ ನದಿ ಪ್ರವಾಹದಿಂದ ಈ ಭಾಗದಲ್ಲಿ ಹಲವು ಮನೆಗಳು ಹಾಗೂ ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ. ನಿಮಗೆ ಇದರಿಂದಾಗಿ ತುಂಬಾ ನಷ್ಟವಾಗಿದೆ ಇದು ನನ್ನ ಗಮನಕ್ಕೆ ಬಂದಿದೆ. ಯಾರೂ ಕೂಡ ಧೈರ್ಯ ಕಳೆದುಕೊಳ್ಳಬಾರದು. ಜನರ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸುವ ಜವಾಬ್ದಾರಿ ನನ್ನದು ಎಂದು ಧೈರ್ಯ ಹೇಳಿದರು. ಈ ಸಂದರ್ಭದಲ್ಲಿ ಸ್ಥಳಿಯ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Read All News