ಬೆಳಗಾವಿ: ತಾಲೂಕಿನ ಮುತ್ಯಾನಟ್ಟಿ ಗ್ರಾಮದಲ್ಲಿ ಬೆಳಗಾವಿ ನಗರ ಹಾಗೂ ಗ್ರಾಮೀಣ ಪ್ರದೇಶದ ಸಾಮಾನ್ಯ ನಾಗರಿಕ ಸೇವಾ ಕೇಂದ್ರ (ಸಿಎಸ್‌ಸಿ) ವಿಎಲ್ಇಗಳ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವ್ಯವಸ್ಥಾಪಕ ವೀರೇಶ ಪುರಾಣಿಕಮಠ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಹಲವಾರು ಸೇವೆಗಳನ್ನು ಒದಗಿಸಲಾಗುತ್ತಿದೆ. ಆದರೆ ಜನರಿಗೆ ಈ ಬಗ್ಗೆ ಅಸಮರ್ಪಕ ಮಾಹಿತಿ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಆದ್ದರಿಂದ ಜನರಲ್ಲಿ ಸಿಎಸ್‌ಸಿ ಬಗ್ಗೆ ಜಾಗೃತೆ ಮೂಡಿಸುವ ಅಗತ್ಯವಿದೆ ಈ ನಿಟ್ಟಿನಲ್ಲಿ ನಮ್ಮ ಎಲ್ಲ ವಿಎಲ್ಇಗಳಿಗೆ ಯಾವುದೇ ರೀತಿಯ ಸಹಾಯ, ಸಹಕಾರ ನೀಡಲು ನಾವು ಬದ್ದ ಆದರೆ ಅವುಗಳನ್ನು ಸರಿಯಾಗಿ ಬಳಸಿಕೊಳ್ಳ ಬೇಕಾಗಿದ್ದು ತಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು. ಇನ್ನೊರ್ವ ವ್ಯವಸ್ಥಾಪಕ ಕಿರಣ ಜೋಶಿ ಮಾತನಾಡಿ ನಾನು ಈಗತಾನೆ ಜಿಲ್ಲಾ ವ್ಯವಸ್ಥಾಪಕನಾಗಿ ನಿಯುಕ್ತಿಕೊಂಡಿದ್ದೇನೆ ಆದ್ದರಿಂದ ನಿಮ್ಮ ಸಹಾಯ, ಸಹಕಾರ ನಮಗೆ ಅವಶ್ಯಕವಾಗಿದೆ ಎಂದು ಹೇಳಿ ಸಿಎಸ್‌ಸಿಯಲ್ಲಿ ಇರುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಜೊತೆಗೆ ವಿಎಲ್ಇಗಳ ಜೊತೆ ಚರ್ಚೆ ನಡೆಸಿ ಕುಂದು ಕೊರತೆಯನ್ನು ವಿಚಾರಿಸಿ ಅವರಿಗೆ ಇದ್ದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಕಾನೂನು ಬಾಹಿರವಾಗಿ ಯಾವುದೇ ಚಟುವಟಿಕೆಗಳಲ್ಲಿ ತೊಡಗಿದ್ದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದೆ ಸಂದರ್ಭದಲ್ಲಿ ನೂತನವಾಗಿ ವ್ಯವಸ್ಥಾಪಕರಾಗಿ ಆಯ್ಕೆಯಾದ ಕಿರಣ್ ಜೋಶಿ ಹಾಗೂ ವೀರೇಶ ಪುರಾಣಿಕಮಠ ಅವರನ್ನು ವಿಎಲ್ಇಗಳ ವತಿಯಿಂದ ಸನ್ಮಾನಿಸಲಾಯಿತು.