ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣದ ಶಾಸಕರ ನಿವಾಸದಲ್ಲಿ ಪಶ್ಚಿಮ ಪದವಿಧರ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಪರವಾಗಿ ಚುನಾವಣೆ ಪ್ರಚಾರ ಸಭೆಯ ಉದ್ಘಾಟನೆಯನ್ನು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಜೆಪಿಯವರು ಜೈಲಿಗೆ ಹೋಗಿ ಬಂದವರು ಎಂದು ಸದಾ ದೂಷಣೆ ಮಾಡುತ್ತಿದ್ದ ಸಿದ್ದರಾಮಯ್ಯ ತಮ್ಮ ಪಕ್ಕದಲ್ಲಿಯೇ ಡಿ.ಕೆ. ಶಿವಕುಮಾರಗೆ ಕುಳ್ಳರಿಸಿಕೊಂಡ ಪಕ್ಷದ ಹಿರಿಯ ಹುದ್ದೆ ನೀಡಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ, ಕೈಗಾರಿಕೆ ಸಚಿವ ಜಗಧೀಶ ಶೆಟ್ಟರ ಕಾಂಗ್ರೇಸ್ ಪಕ್ಷವನ್ನು ಟೀಕಿಸಿದರು. ಯಡಿಯೂರಪ್ಪ ಇಳಿವಯಸ್ಸಿನಲ್ಲೂ ಕೊರೋನಾ ಸಾಂಕ್ರಾಮಿಕ ಕಾಲದಲ್ಲೂ ಹದಿನಾರು ತಾಸಿಗೂ ಹೆಚ್ಚು ಕೆಲಸ ಮಾಡಿ ರಾಜ್ಯದ ಅಭಿವೃದ್ಧಿಗೆ ಪೂರಕ ಸಹಕಾರ ನೀಡುತ್ತಿದ್ದಾರೆ. ಅಲ್ಲದೇ ನರೇಂದ್ರ ಮೋದಿ ಪ್ರದಾನಿಯಾದ ಮೇಲೆ ದೇಶದ ಅನೇಕ ಜ್ವಲಂತ ಸಮಸ್ಯಗಳಿಗೆ ಮುಕ್ತಿ ನೀಡಲಾಗಿದೆ. ಅದರಲ್ಲಿ ಜಮ್ಮುಕಾಶ್ಮೀರ ವಿಮೋಚನೆ, ಗಡಿ ಸಮಸ್ಯಗಳು ಶಾಪವಾಗಿ ಪರಿಣಮಿಸಿದ್ದವು. ಇಂದು ಭಾರತ ದೇಶ ವಿದೇಶಾಂಗ ನೀತಿಯನ್ನು ಸಾಕಷ್ಟು ಬದಲಾಯಿದೆ. ನಿರ್ಣಾಯಕ ಕಾಲಘಟ್ಟದಲ್ಲಿದ್ದೇವೆ. ಜಗತ್ತಿನಲ್ಲಿಯೇ ದೇಶಕ್ಕೆ ಹೆಚ್ಚು ಬೆಲೆ ಬರುವಂತಾಗಿದ್ದು ಪ್ರದಾನಿ ಮೋದಿಯವರ ಚಾಣಾಕ್ಷ ಆಡಳಿತದಿಂದಲೇ ಎಂದ ಅವರು ಕಾರಣ ವಿದಾನ ಪರಿಷತ್ತ ಚುನಾವಣೆಯಲ್ಲಿ ಪ್ರಜ್ಞಾವಂತ ಪದವಿಧರರು ಪಕ್ಷದ ಅಭ್ಯರ್ಥಿ ಎಸ್.ವಿ. ಸಂಕನೂರ ಅವರಿಗೆ ಹೆಚ್ಚಿನ ಪ್ರಾಶಸ್ತ ಮತ ನೀಡಿ ಅಭೂತಪೂರ್ವ ಗೆಲುವಿಗೆ ಕಾರಣವಾಗಬೇಕೆಂದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಎಸ್.ವಿ. ಸಂಕನೂರು 35 ವರ್ಷ ಉಪನ್ಯಾಸಕರು ಹಾಗೂ, ಪ್ರಾಂಶುಪಾಲರಾಗಿ ಹೆಚ್ಚು ಕಾಲ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದವರು. ಅಧಿವೇಶನ ಸಂದರ್ಭದಲ್ಲಿ ಪದವಿಧರರ ಸಮಸ್ಯಗಳ ಬಗ್ಗೆ ವಿದಾನ ಪರಿಷತ್ತನಲ್ಲಿ ಹೆಚ್ಚು ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಎರಡನೇ ಅವಧಿಗೆ ಪದವಿಧರರು ಪ್ರಥಮ ಪ್ರಾಶಸ್ತೆ ನೀಡಬೇಕೆಂದರು.
ಈ ಸಂದರ್ಭದಲ್ಲಿ ಸಂಸದ ಶಿವಕುಮಾರ ಉದಾಸಿ. ಕೃಷಿ ಸಚಿವ ಬಿಸಿ ಪಾಟೀಲ. ಹಾವೇರಿ ಶಾಸಕ ನೆಹರು ಓಲೇಕಾರ, ವಿದಾನ ಪರಿಷತ್ತ ಮಾಜಿ ಸದಸ್ಯ ಶಿವರಾಜ ಸಜ್ಜನ, ರಾಜ್ಯ ಬಿಜೆಪಿ ಪ್ರದಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದರಾಜ ಕಲಕೋಟಿ. ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ನಿಶೀಮಗೌಡ್ರ, ಜಯತೀರ್ಥ ಕಟ್ಟಿ. ಶಿಗ್ಗಾವಿ ಸವಣೂರು ತಾಲೂಕಿನ ಪಕ್ಷದ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಗಂಗಾಧರ ಬಾಣದ ಹಾಗೂ ಇನ್ನೀತರರು ಉಪಸ್ಥಿತರಿದ್ದರು.