ಮಹಾಮಾರಿ ಕೊರೋನಾ ತೋಲಗಿಸುವಂತೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರು

  • 15 Jan 2024 , 12:21 AM
  • Haveri
  • 112

ಹಾವೇರಿ: ಆರು ತಿಂಗಳಿoದ ಜನರನ್ನು ಕಾಡುತ್ತಿರು ಮಹಾಮಾರಿ ಕೊರೋನಾವನ್ನು ತೊಲಗಿಸುವಂತೆ ಇಂದು ಆಶಾ ಕಾರ್ಯಕರ್ತರು ದ್ಯಾಮವ್ವಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ನವರಾತ್ರಿ ಅಂಗವಾಗಿ ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿದ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕಾಧ್ಯಕ್ಷೆ ಮಂಜುಳಾ ಮಾಸೂರು, ಕೊರೋನಾ ಆತಂಕದಿAದ ಜನರು ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದಾರೆ. ಆದ್ದರಿಂದ ಸಾರ್ವಜನಿಕರು ಆರೋಗ್ಯ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ದೇಶಾದ್ಯಂತ ಮಾರ್ಚ ತಿಂಗಳಿAದ ಕೊರೋನಾ ಹರಡುತ್ತಿದ್ದಂತೆ ಸಾಕಷ್ಟು ಜನರಲ್ಲಿ ಆರೋಗ್ಯ ತೊಂದರೆಗಳು ಕಾಣಿಸಿಕೊಂಡು ಸಾವಿರಾರು ಜನರು ಮೃತಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ, ಪೋಲಿಸ, ಪುರಸಭೆ ಸಿಬ್ಬಂದಿಗಳು ಹಗಲಿರುಳೆನ್ನದೆ ರೋಗ ನಿಯಂತ್ರಿಸುವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಮನೆಮನೆಗೂ ತೆರಳಿ ರೋಗದ ಮಾಹಿತಿ ನೀಡುವ ಮೂಲಕ ಜನರ ಆರೋಗ್ಯ ಕಾಪಾಡುವಲ್ಲಿ ಮುಂದಾಗಿದ್ದು, ಸಾರ್ವಜನಿಕರ ಸಹಕಾರ ಮುಖ್ಯವೆಂದರು. ಯಾರ ಪ್ರಾಣಕ್ಕೂ ಹಾನಿಯಾಗಬಾರದು ಹಾಗೂ ಜನರಲ್ಲಿ ರೋಗದ ಬಗ್ಗೆ ಇರುವ ಆತಂಕ ದೂರವಾಗಿ ದೈರ್ಯದಿಂದ ಬದುಕು ಸಾಗಿಸುವಂತಾಗಲಿ ಎಂದು ದೇವರಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತೆಯರಾದ ರೇಖಾ ಕರಿಗಾರ, ಜ್ಯೋತಿ ಶಿರಾಳಕೊಪ್ಪ, ಸಾವಿತ್ರ ಬೆನ್ನೂರು, ಜಯಮ್ಮ ಹಿರೇಮಠ ಉಪಸ್ಥಿತರಿದ್ದರು.

Read All News