ಮೈಸೂರು: ತಾಲೂಕಿನ ಚಪ್ಪರದಹಳ್ಳಿ ಸೇರಿದಂತೆ ಗೋರಹಳ್ಳಿ ಗ್ರಾಮದಿಂದ ಹಾರನಹಳ್ಳಿ ಅಂಬಲಾರೆ ಮೂಲಕ ಚನಕೇಶವಪುರ ದೊಡ್ಡಕಮರವಲ್ಲಿ ಗ್ರಾಮದ ವರೆಗೆ 16 ಕಿಲೋಮೀಟರ್ 16.50 ಕೋಟಿ ವೆಚ್ಚದಲ್ಲಿ ಒಳ ಚರಂಡಿ, ಕಾಂಕ್ರಿಟ್ ರಸ್ತೆ ಕಾಮಗಾರಿಗಳಿಗೆ ಶಾಸಕ ಕೆ ಮಹದೇವ್ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಗ್ರಾಮದಲ್ಲಿರುವ ಶಿವನ ದೇವಾಲಯಕ್ಕೆ 5 ಲಕ್ಷ ರೂ ನೆರವು ನೀಡುವುದಾಗಿ ಭರವಸೆ ನೀಡಿದರು.
ಭಾವುಕರಾಗಿ ಕಣ್ಣೀರು ಹಾಕಿದ ಶಾಸಕ ಕೆ ಮಹದೇವ್: ಭಾವುಕರಾದ ಶಾಸಕ ಕೆ ಮಹದೇವ್ ನಾನು ಕೋವಿಡ್ 19 ರೋಗಕ್ಕೆ ತುತ್ತಾಗಿದ್ದು ನಾನು ಬದುಕುತ್ತಿನೀ ಎಂದು ಭಾವಿಸಿರಲಿಲ್ಲ ಆದರೆ ನಿಮ್ಮೆಲ್ಲರ ಆಶೀರ್ವಾದದಿಂದ ಬದುಕಿ ಬಂದಿದ್ದೇನೆ. ನಿಮ್ಮ ಪ್ರೀತಿ ಹೀಗೆ ಇರಲಿ ನಾನು ನಿಮ್ಮ ಸೇವೆಗೆ ಸದಾ ಸಿದ್ಧನಾಗಿದ್ದೇನೆ ಎಂದು ಭಾವುಕರಾಗಿ ಮಾತನಾಡಿದರು.