ಬೆಳಗಾವಿ: ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದ ಕಂದಾಯ ಸಚಿವರಾದ ಆರ್. ಅಶೋಕ ಇಂದು ಹುಕ್ಕೇರಿ ತಾಲೂಕಿನ ಯಕಮಕನಮರಡಿ ಮತ ಕ್ಷೇತ್ರದ ಹತ್ತರಗಿ ಹಾಗೂ ಜಿನರಾಳ ಗ್ರಾಮಕ್ಕೆ ಭೇಟಿ ನೀಡಿ ಅತಿವೃಷ್ಟಿಯಿಂದ ನಾಶವಾದ ಟೊಮೆಟೊ ಹಾಗೂ ಪ್ಲಾವರ್ ಬೆಳೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮಾರುತಿ ಅಷ್ಟಗಿ ಸಚಿವರಿಗೆ ಕ್ಷೇತ್ರದಲ್ಲಿ ಆದ ಬೆಳೆ ಹಾನಿಯ ಬಗ್ಗೆ ತಿಳಿಸಿದರು.