ಕೋರೊನಾ ಭಯವಿಲ್ಲದೆ ಹಬ್ಬವನ್ನು ಆಚರಿಸಿದ ಜನ

  • 23 Dec 2023 , 6:29 AM
  • Belagavi
  • 107
ರಾಜ್ಯದಲ್ಲಿ ಇಗ ಕೋರೊನಾ ಹವಾ ಅಂತು ಶುರುವಾಗಿದೆ ಅದರಲ್ಲು ಅದರ ನಡುವೆ ರಾಜ್ಯದ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಕಾರ ಹುಣ್ಣುಮೆ ಹಬ್ಬ ಬಲು ಜೋರಾಗಿಯೆ ಇಂದು ನಡೆದಿದೆ ಉತ್ತರ ಕರ್ನಾಟಕ ದಲ್ಲಿ ಬಹಳ ವೈಶಿಷ್ಟ್ಯ ಪೂರ್ಣ ವಾಗಿ ಆಚರಿಸುತ್ತಾರೆ . ನಗರಗಳಲ್ಲಿ ಹಬ್ಬವನ್ನು ದೇವಸ್ಥಾನಗಳಿಗೆ ಹೋಗಿ ಅಲ್ಲಿ ಆಲದ ಮರಕ್ಕೆ ದಾರವನ್ನು ಕಟ್ಟುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಬಳಸಿಕೊಳ್ಳುವರು. ಇಂದು ಬೆಳಗಾವಿಯಲ್ಲಿ ಕೋರೊನಾದ ಭಯವಿಲ್ಲದೆ ಜನ ಕಾರ ಹುಣ್ಣುಮೆಯನ್ನು ಆಚರಿಸಿದರು.
ಉತ್ತರ ಕರ್ನಾಟಕದ ಎಲ್ಲ ಹಳ್ಳಿಗಳಲ್ಲಿ ಕಾರ ಹುಣ್ಣುಮೆ ಹಬ್ಬವನ್ನು ಈ ದಿನ ಜೋಳದ ಕಿಚಡಿಯನ್ನು ದೇವರಿಗೆ ನೈವೇದ್ಯ ಮಾಡುತ್ತಾರೆ ಜಾನುವಾರುಗಳಿಗೆ ಪೂಜೆ ಮಾಡಿ ನೈವೇದ್ಯವನ್ನು ತಿನಿಸುತ್ತಾರೆ . ರೈತರು ತಮ್ಮ ಬಂಡಿಗೆ ಬೇಕಾಗುವ ಚಕ್ರ, ತೊಟ್ಟಿಲುಗಳ ಎತ್ತು ಬಂಡಿಯನ್ನು ಅಲಂಕಾರ ಮಾಡಿ ಎತ್ತುಗಳನ್ನು ಶೃಂಗರಿಸಿ ಅನುಕೂಲಕ್ಕೆ ತಕ್ಕಂತೆ ಆಭರಣ ಗಳನ್ನೂ ತೊಡಿಸುತ್ತಾರೆ. ಜೋಳದ ಅಂಬಲಿ, ಗಾನದೆಣ್ಣೆ, ಅರಿಶಿಣ ಪುಡಿ, ಮೊಟ್ಟೆ ಸೇರಿಸಿ ಗೊಟ್ಟದ ಮೂಲಕ ತೆಗೆದುಕೊಂಡು ತಮ್ಮ ತೋಟಕ್ಕೆ ಎಲ್ಲ ಕುಟುಂಬದವರು ಸೇರಿಕೊಂಡು ಹೋಗಿ ಬಹಳ ವೈವಿಧ್ಯಮಯ ವಾಗಿ ಕಾರ ಹುಣ್ಣುಮೆ ಹಬ್ಬವನ್ನು ಆಚರಿಸಿದರು .

Read All News