ಯೋಗರಾಜ ಭಟ್ಟರ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣ ಜತೆಗೆ ದಕ್ಷಿಣ ಭಾರತದ ಖ್ಯಾತ ನಟ, ಪ್ರಭುದೇವ ಸಾಥ್

  • 19 Dec 2023 , 10:29 AM
  • Bengaluru
  • 146

   ಬೆಂಗಳೂರ  :ಹ್ಯಾಟ್ರಿಕ್ ಹೀರೋ  ಶಿವರಾಜ್‌ಕುಮಾರ್ ಯೋಗರಾಜ್ ಭಟ್ ಜತೆಗೆ ಚಿತ್ರವೊಂದನ್ನು ಮಾಡುತ್ತಾರೆನ್ನುವ ಸುದ್ದಿ ಕೆಲ ದಿನಗಳಿಂದ ಗಾಂಧಿನಗರದಲ್ಲಿ ಸಕತ್ ವೈರಲ್ ಆಗಿದೆ ಭಟ್ರ ಚಿತ್ರಕ್ಕೆ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದು. ಇದಲ್ಲದೆ ಈ ಚಿತ್ರದಲ್ಲಿ ಶಿವಣ್ಣನ ಜತೆಗೆ ದಕ್ಷಿಣ ಭಾರತದ ಖ್ಯಾತ ನಟ, ಪ್ರಭುದೇವ ಸಹ ನಟಿಸುತ್ತಿರುವದು ಅಭಿಮಾನಿಗಳಲ್ಲಿ ಕುತುಹಲ ಮೂಡಿಸಿದೆ.

ಯೋಗರಾಜ್ ಭಟ್ ಚಿತ್ರ ಎಂದರೆ ಕುತುಹಲವಿರುವದಂತು ನೀಜ ಬಹು ದೊಡ್ಡ ಕಥಾಹಂದರ ರಚಿಸಿರುವ ಭಟ್ಟರು.  ಅವರು ಪ್ರಭುದೇವ ಮತ್ತು ನನ್ನ ಎರಡೂ ಪಾತ್ರಗಳನ್ನು ಸಮಾನವಾಗಿ ತೋರಿಸಲಿದ್ದಾರೆ. ಪ್ರೀತಿಯ ಅಂಶವು ಇಡೀ ಚಿತ್ರಕ್ಕೆ ಸಾಕಷ್ಟು ತೂಕವನ್ನು ನೀಡುತ್ತದೆ" ಎಂದು ಶಿವಣ್ಣ ಹೇಳುತ್ತಾರೆ. ಪ್ರಭುದೇವ ಕೂಡ ಸ್ಕ್ರಿಪ್ಟ್ ಕೇಳಿದ್ದಾರೆ ಮತ್ತು ಅವರು ಅದನ್ನು ಇಷ್ಟಪಟ್ಟಿದ್ದಾರೆ. ಮೈಸೂರು ಮೂಲದ ಪ್ರಭುದೇವ ದಕ್ಷಿಣ ಭಾರತದ ಚಲನಚಿತ್ರೋದ್ಯಮ ಮತ್ತು ಬಾಲಿವುಡ್‌ನ ಖ್ಯಾತ ನಟ ಮತ್ತು ನಿರ್ದೇಶಕರಾಗಿದ್ದಾರೆ. ಭಟ್ರ ಇನ್ನೂ ಹೆಸರಿಡದ ಈ ಚಿತ್ರದ ಶೂಟಿಂಗ್ 2021 ರಲ್ಲಿ ಪ್ರಾರಂಭವಾಗಲಿದೆ.

Read All News