ರಮೇಶ ಕತ್ತಿ 57ನೇ ಹುಟ್ಟು ಹಬ್ಬದ ಅಂಗವಾಗಿ ಸಿಹಿ ಮತ್ತು ಹಾಲು ವಿತರಣೆ

  • 15 Jan 2024 , 12:22 AM
  • Belagavi
  • 118

ಹುಕ್ಕೇರಿ: ತಾಲೂಕಿನ ಹಿಕಡಲ್ ಡ್ಯಾಮಿನಲ್ಲಿ ಮಹಿಳಾ ಕಲ್ಯಾಣ ಸಂಸ್ಥೆ ಆಶ್ರಯ ಸ್ವಧಾರ ವಸತಿ ಗೃಹದಲ್ಲಿ ಇಂದು ಮಾಜಿ ಸಂಸದ ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಅವರ 57ನೇ ಹುಟ್ಟು ಹಬ್ಬವನ್ನು ಆಚರಿಸಿಲಾಯಿತು. ಚಿಕ್ಕೋಡಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಲಗೌಡಾ ಪಾಟೀಲ ಅವರು ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆಗೆ ಚಾಲನೆ ನೀಡಿ ಸಿಹಿ ಮತ್ತು ಹಾಲು ವಿತರಿಸಿದರು. ಹುಕ್ಕೇರಿ ಬಿಜೆಪಿ ಘಟಕದ ಅಧ್ಯಕ್ಷ ರಾಚಯ್ಯಾ ಹಿರೇಮಠ ಮಾತನಾಡಿ ಸಹಕಾರ ಸಂಘ ಸಂಸ್ಥೆಗಳು ಪ್ರಗತಿಯತ್ತ ಸಾಗಬೇಕಾದರೆ ರಮೇಶ ಕತ್ತಿಯವರ ಕೊಡುಗೆ ಅಪಾರವಾದುದು. ಸಹಕಾರ ಸಂಘ ಸಂಸ್ಥೆಗಳಲ್ಲಿ ರಾಜಕೀಯವನ್ನು ಹೊರತುಪಡಿಸಿ ಅವುಗಳ ಬೆಳವಣಿಗೆಗೆ ರಮೇಶ ಕತ್ತಿಯವರು ದುಡಿಯುತ್ತಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ನಿರ್ದೇಶಕ ವಹಿಸಿದರು. ಕಾರ್ಯಕ್ರಮದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುಸ್ ಸಹಕಾರಿ ಸಂಘದ ನಿರ್ದೇಶಕರಾರದ ಈರಣ್ಣಾ ಬಂಜಿರಾಮ, ಜೊಮಲಿಂಗ ಪಟ್ಟೋಳಿ ಮತ್ತು ಹಿರಿಯ ಧುರೀಣರಾದ ಬಸನಾಯಿಕ ಕುಂದರಗಿ ಮತ್ತು ಘೋಡಗೇರಿಯ ಯುವ ಧುರೀಣ ನವೀನ ಕಡೆಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಮಣ್ಣ ಶಿಂತ್ರೆ, ನಿಸಾರ ಶೇಖ, ವಿಜಯ ಮೆಲಗೇರಿ, ಆಸಪಾಕ್ ಬಾಗವಾನ, ಈರ್ಷಾದ ಕಿಲ್ಲೇದಾರ, ಚಿಕ್ಕೋಡಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪತ್ತಾರ, ಎಸ್ ಡಿ ಎಮ್ ಸಿ ಮಾಜಿ ಅಧ್ಯಕ್ಷ ಸೋಮಲಿಂಗ ಪಾಟೀಲ, ಕರ್ನಾಟಕ ಪತ್ರಕರ್ತರ ಸಂಘದ ಹುಕ್ಕೇರಿ ತಾಲೂಕಾ ಕಾರ್ಯದರ್ಶಿ ದೀಪಕ ನಾಡಗೌಡ, ಬಿಡಿಸಿಸಿ ಬ್ಯಾಂಕ್ ಪಾಶ್ಚಾಪೂರ ವಲಯದ ಬ್ಯಾಂಕ್ ನಿರೀಕ್ಷಕ, ಅಶೋಕ ನಿರಲಗಿ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Read All News