ಲಿಂಗಾಯತ ಸಮುದಾಯದ ಅಭಿವೃದ್ಧಿಗಾಗಿ 28 ರಂದು ಬೆಳಗಾವಿ ಶಕ್ತಿಸೌಧದ ಎದುರು ಸತ್ಯಾಗ್ರಹ: ಜಯಮೃತುಂಜಯ ಶ್ರೀ

  • 12 Dec 2023 , 1:49 PM
  • Belagavi
  • 297

ಬೆಳಗಾವಿ: ಆರ್ಥಿಕ ಸಂಕಷ್ಟದಲ್ಲಿರುವ ಲಿಂಗಾಯತ ಸಮುದಾಯದ ಏಳಿಗೆ, ಲಿಂಗಾಯತ ಅಭಿವೃದ್ಧಿ ನಿಗಮ ಹಾಗೂ ಲಿಂಗಾಯತ ಮೀಸಲಾತಿ ಈಡೇರಿಸುವಂತೆ ಅ.‌ 28 ರಂದು ಬುಧವಾರ ಸುವರ್ಣ ಸೌದ ಮುಂಭಾಗದಲ್ಲಿ ಸತ್ಯಾಗ್ರಹ ನಡೆಸಲಾಗುವುದು. ಎಂದು ಪಂಚಮ ಪೀಠದ ಶ್ರೀಜಯಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.

ನಗರದ ಖಾಸಗಿ ಹೊಟೆಲ್ ನಲ್ಲಿ ಬುಧವಾರ ಸುದ್ದಿಗೋಷ್ಠಿ ಅವರು ಮಾತನಾಡಿದ ಅವರು ಕೃಷಿ ಕಾಯಕ ಮೇಲೆ ಅವಲಂಬಿತವಾಗಿರುವ ಲಿಂಗಾಯತದ ಸಮೃದ್ಧಿಗಾಗಿ ಈ ಮೀಸಲಾತಿ ಅಗತ್ಯವಿದೆ. ಜಿಲ್ಲೆ, ರಾಜ್ಯದಲ್ಲಿ ಸುಮಾರು ಶೇ 70 ರಷ್ಟು ಲಿಂಗಾಯತ ಸಮುದಾಯದ ಜೀವನ ರೂಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ ಅವರಿಗೆ ಸೂಕ್ತ ಮೀಸಲಾತಿ ಒದಗಿಸಿದರೆ ಹಿಂದುಳಿದ ಲಿಂಗಾಯತರು ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ಲಿಂಗಾಯತ ಜಂಗಾದವ ರಾಜ್ಯ ಸರಕಾರದ 2ಎ ಮೀಸಲಾತಿಯಲ್ಲಿ ಹಾಗೂ ಕೇಂದ್ರ ಸರಕಾರದ ಓಬಿಸಿ ಮೀಸಲಾತಿಯಲ್ಲಿ‌ ಲಿಂಗಾಯತ ಸಮಾಜವನ್ನು ಸೇರ್ಪಡೆಗೊಳಿಸಬೇಕೆಂದು ಸರ್ಕಾರಕ್ಕೆ ಆಗ್ರಹ ಮಾಡಲಾಗುವುದು.

logintomyvoice

ಮೊದಲ ಬಾರಿಗೆ ಪಂಚಮಿ ಪೀಠದ ಸಮಾಜದವರು ಹಾಗೂ ಗಣ್ಯರ ಸಮ್ಮುಖದಲ್ಲಿ ನಿರ್ಣಯವನ್ನು ತೆಗೆದುಕೊಳ್ಳಲು ಶಾಂತಿಯುತ ಸತ್ಯಾಗ್ರಹ ಮಾಡುವ ಮೂಲಕ ರಾಜ್ಯ, ಕೇಂದ್ರ ಸರಕಾರಕ್ಕೆ ಸಮಾಜದಿಂದ ಹಕ್ಕೊತ್ತಾಯ ಮಾಡಲಾಗುವುದು ಎಂದರು.

Read All News