ಹುಕ್ಕೇರಿ: ಶಾಸಕ ಉಮೇಶ ಕತ್ತಿ ಮತ್ತು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹಾಗೂ ಬೆಳಗಾವಿ ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿಯವರ ನೇತೃತ್ವದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘವು ಪ್ರಗತಿಯತ್ತ ಮುನ್ನಡೆಯುತ್ತಿದ್ದು, ಸಂಘದ ಏಳಿಗೆಗಾಗಿ ಶ್ರಮಿಸುವುದಾಗಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ನಿರ್ದೇಶಕ ಕಲಗೌಡಾ ಪಾಟೀಲ ಹೇಳಿದರು. ಹಿಡಕಲ್ ಡ್ಯಾಮಿನ ಮಹಿಳಾ ಕಲ್ಯಾಣ ಸಂಸ್ಥೆಯ ಆಶ್ರಯ ಸ್ವಧಾರ ವಸತಿ ಗೃಹದಲ್ಲಿ ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಕಳೆದ 20 ವರ್ಷಗಳ ಅವಧಿಯಲ್ಲಿ ಬಿಡಿಸಿಸಿ ಬ್ಯಾಂಕಿನಿಂದ 40 ಲಕ್ಷ ರೈತರ ಸಾಲಮನ್ನಾ ಮಾಡಿದ್ದು, ಒಂದು ಇತಿಹಾಸವಾಗಿದೆ. ಯಮನಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಇದ್ದ 17 ಲಕ್ಷ ರೂಪಾಯಿ ಬೆಳೆಸಾಲವನ್ನು 1,71,00,000/- ರೂ. ಮತ್ತು ಕರಗುಪ್ಪಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಇದ್ದ 80,00,000/- ರೂ. ಬೆಳೆ ಸಾಲವನ್ನು 4 ಕೋಟಿ ಬೆಳೆಸಾಲವನ್ನು ಹೆಚ್ಚುವರಿಯಾಗಿ ರಮೇಶ ಕತ್ತಿಯವರು ಮಾಡಿದ್ದರಿಂದ ರೈತಾಪಿ ಜನರಿಗೆ ಅನುಕೂಲವಾಗಿದೆ ಹಾಗೂ ಭಾಗ್ಯ ಜೋತೆ ಯೋಜನೆ ಬಡವರಿಗೆ ಬಹು ಅನೂಕಕರವಾಗಿದೆ,ಸಂಸ್ಥೆಯ ಸಹಯಾಒಗದಲ್ಲಿ ನಿರಂತರ ಜ್ಯೋತಿ ನೀಡಿ ಅತೀ ದೊಡ್ಡ ಸಹಕಾರಿ ಸಂಸ್ಥೆ ಯಾಗಿ ಬೆಳೆಸಲುಗಿದೆ ಎಂದು ಕಲಗೌಡಾ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರಾದ ಅಶೋಕ ಚಂದಪ್ಪಗೋಳ, ಈರಪ್ಪಾ ರುದ್ರಪ್ಪಾ ಬಂಜಿರಾಮ, ಜೋಮಲಿಂಗ ಪಟೋಳಿ ಮತ್ತು ಬಿಜೆಪಿ ಹುಕ್ಕೇರಿ ಮಂಡಳ ಅಧ್ಯಕ್ಷ ರಾಚಯ್ಯಾ ಹಿರೇಮಠ, ಗಣ್ಯರಾದ ಬಸನಾಯಿಕ ಕುಂದರಗಿ, ನವೀನ ಕಡೇಲಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹುಕ್ಕೇರಿ ಘಟಕದ ಅಧ್ಯಕ್ಷ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಮೇಶ ಮಗದುಮ್ಮ, ನಿಸ್ಸಾರಶೇಖ್, ವಿಜಯ ಮೆಲಗೇರಿ, ಅಶ್ಫಾಕ್ ಬಾಗವಾನ್, ಘೋಡಗೇರಿ ಶ್ರೀ ಕುರ್ಲಾದೇವಿ ನೀರು ಬಳಕೆದಾರರ ಸಹಕಾರಿ ಸಂಘದ ನಿರ್ದೇಶಕ, ಬಾಬಾಸಾಬ ಮೊಕಾಶಿ, ಚಿಕ್ಕೋಡಿ ವಿಭಾಗದ ಬಿಜೆಪಿ ಯುವ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪತ್ತಾರ, ಮಾಜಿ ಎಸ್.ಡಿ.ಎಮ್.ಸಿ. ಅಧ್ಯಕ್ಷ ಸೋಮನಿಂಗ ಪಾಟೀಲ, ಕರ್ನಾಟಕ ಪತ್ರಕರ್ತರ ಸಂಘ ಹುಕ್ಕೇರಿ ತಾಲೂಕಾ ಕಾರ್ಯದರ್ಶಿ, ದೀಪಕ ನಾಡಗೌಡ ಹಾಗೂ ಇನ್ನಳಿದ ಗಣ್ಯರು ಉಪಸ್ಥಿತರಿದ್ದರು. ಮಹಿಳಾ ಕಲ್ಯಾಣ ಸಂಸ್ಥೆಯ ಅಧೀಕ ಶೆಟ್ಟಿ, ರಾಧಿಕಾ ಬಡಿಗೇರ, ಕಾರ್ಯಕ್ರಮ ನಿರೂಪಿಸಿದರು.