ನಿಪ್ಪಾಣಿ: 19ನೇ ಶತಮಾನದ ಮಹಾಯೋಗಿ ಸದ್ಗುರು ಬಾಳುಮಾಮಾ ಅವರ ಮೂಲ ಜನ್ಮಸ್ಥಳವಾದ ನಿಪ್ಪಾಣಿ ತಾಲೂಕಿನ ಅಕ್ಕೊಳ ಗ್ರಾಮದಲ್ಲಿ, ಇಂದು ಬಾಳುಮಾಮಾ ಮಂದಿರ ಸಭಾಮಂಟಪ ನಿರ್ಮಾಣದ ಶಿಲಾನ್ಯಾಸ ಸಮಾರಂಭ ನೆರೆವೇರಿತು.
ಈ ಸಂದರ್ಭದಲ್ಲಿ ನಂದಿಕುರಳಿಯ ಮ.ನಿ.ಪ್ರ ಪಂಚಲಿoಗ ವೀರಭದ್ರ ಸ್ವಾಮೀಜಿಗಳು, ಕವಲಗುಡ ಮ.ನಿ.ಪೂ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಹಾಗೂ ನಿಪ್ಪಾಣಿ ಸಮಾಧಿ ಮಠದ ಪ್ರಾಣಲಿಂಗ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಬಸವಪ್ರಸಾದ ಜೊಲ್ಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.