ರಾಣೇಬೆನ್ನೂರು: ತಾಲೂಕಿನ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನದಲ್ಲಿ ದಸರಾ ಮಹೋತ್ಸವ ಪ್ರಯುಕ್ತ ನಡೆಯುವ ಕಾರ್ಣಿಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ಅವಕಾಶವಿಲ್ಲ ಆದ್ದರಿಂದ ಭಕ್ತರು ಸ್ಪಂದಿಸಬೇಕು ಎಂದು ದೇವಸ್ಥಾನದ ಪ್ರಧಾನ ಆರ್ಚಕ ಸಂತೋಷ ಭಟ್ ಪೂಜಾರ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅ.24ರಂದು ಸಂಜೆ 5.30ಕ್ಕೆ ಶ್ರೀ ಮಾಲತೇಶ ಸ್ವಾಮಿಯ ಕಾರ್ಣಿಕೋತ್ಸವ ಜರುಗಲಿದೆ. ಆದರೆ, ಕರೊನಾ ಸೋಂಕು ತಡೆಯುವ ಹಿತದೃಷ್ಟಿಯಿಂದ ಹಾಗೂ ಸರ್ಕಾರ ಕೆಲವು ನಿರ್ಬಂದನೆಗಳನ್ನು ಪಾಲಿಸಬೇಕಾಗಿದ್ದು, ಈ ಬಾರಿ ಭಕ್ತರು ಪಾಲ್ಗೊಳ್ಳುವುದನ್ನು ನಿಷೇಧಿಸಲಾಗಿದೆ. ಕೇವಲ ದೇವಸ್ಥಾನದ ಅರ್ಚಕರು, ಭಂಡಾರದ ಗುರುಗಳು, ದೇವಸ್ಥಾನ ಸಮಿತಿಯವರು ಮಾತ್ರ ಕಾರ್ಣಿಕದಲ್ಲಿ ಭಾಗವಹಿಸಲಿದ್ದಾರೆ. ಅ. 25ರಂದು ಮಧ್ಯಾಹ್ನ 3 ಗಂಟೆಗೆ ಕಂಚವೀರರಿAದ ಶಸ್ತ್ರಪವಾಡ, ಗೋರವಯ್ಯನವರಿಂದ ಸರಪಳಿ ಪವಾಡ ಹಾಗೂ ಸಂಜೆ 5 ಗಂಟೆಗೆ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗುವುದು. ಭಕ್ತರು ಶ್ರೀ ಮಾಲತೇಶ ಸ್ವಾಮಿದೇವರ ದರ್ಶನವನ್ನು ಪಡೆದುಕೊಳ್ಳಬಹುದು. ಈ ಕುರಿತು ಡಿವೈಎಸ್ಪಿ ಟಿ.ವಿ. ಸುರೇಶ ಹಾಗೂ ಸಿಪಿಐ ಭಾಗ್ಯವತಿ ನೇತೃತ್ವದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಚೇರ್ಮನ್ ಎಂ.ಎA.ಸತಗಿ, ಸದಸ್ಯ ನಿಂಗಪ್ಪ ಮುದ್ದಿ, ಭಂಡಾರದ ಗುರುಗಳು ಮಲ್ಲಪ್ಪಯ್ಯ ಒಡೆಯರ, ಗ್ರಾಮಸ್ಥರು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಭಕ್ತರು ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ