ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಪೂರ್ವಭಾವಿ ಸಭೆ

  • 10 Jan 2024 , 5:56 AM
  • Haveri
  • 177

ಬ್ಯಾಡಗಿ: ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಪೂರ್ವಭಾವಿ ಸಭೆ ಗುರುವಾರ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ, ತಹಸೀಲ್ದಾರ ರವಿ ಕೊರವರ ಸಭೆ ಉದ್ದೇಶಿಸಿ ಮಾತನಾಡಿ, ಪ್ರಸಕ್ತ ಸಾಲಿನ ಬಹುತೇಕ ಜಯಂತ್ಯುತ್ಸವಗಳನ್ನು ಸರ್ಕಾರದ ವತಿಯಿಂದ ಸರಳವಾಗಿ ಆಚರಿಸಲಾಗುತ್ತಿದೆ. ಹಬ್ಬ, ಹರಿದಿನ, ಉತ್ಸವ ಜಾತ್ರೆಗಳಿಗೆ ನಿರ್ಬಂಧ ಹಾಕಲಾಗಿದೆ. ಕೋರೊನಾ ರೋಗ ತಡೆಗಟ್ಟುವ ಸಲುವಾಗಿ ಎಲ್ಲರೂ ಸರ್ಕಾರದ ನಿರ್ಧೇಶನ ಪಾಲಿಸಬೇಕಿದೆ. ಈ ಹಿನ್ನಲೆಯಲ್ಲಿ ಸಮಾಜ ಬಾಂಧವರು ಹಾಗೂ ಸಾರ್ವಜನಿಕರು ಎಲ್ಲ ಜಯಂತ್ಯುತ್ಸವಗಳನ್ನು, ಜನರನ್ನು ನಿರೀಕ್ಷಿಸದೆ, ಸಾಂಪ್ರದಾಯಿಕ ಪದ್ದತಿಯಲ್ಲಿ ಆಚರಿಸುವಂತೆ ಮನವಿ ಮಾಡಿದರು. ಈ ವೇಳೆ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಪುಂಡಲೀಕ ಮಾನನವರ, ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಹೊನ್ನೂರಪ್ಪ ಕಾಡಸಾಲಿ, ಪದಾಧಿಕಾರಿಗಳಾದ ಶಿವಾನಂದ ಯಮನಕ್ಕನವರ, ಪುರಸಭೆ ಸದಸ್ಯ ರಾಮಣ್ಣ ಕೋಡಿಹಳ್ಳಿ, ದುಗ್ಗಪ್ಪ ಬಂದ್ರಾಳ, ಮಲ್ಲೇಶಪ್ಪ ವಾಲ್ಮೀಕಿ, ವಕೀಲ ಶಿವಪ್ಪ ಅಂಬಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read All News