ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿರುವ ಅಂಬಡಗಟ್ಟಿ ಗ್ರಾಮದ ಶ್ರೀ ಸತೀಶಣ್ಣಾ ಕಲ್ಯಾಣ ಮಂಟಪದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ತಿಗಡೊಳ್ಳಿ ಗ್ರಾಮದ ಸಂಗೀತಾ ಕಲ್ಲೂರು ಇವಳ ಪ್ರಾಮಾಣಿಕ ಸೇವೆ ಗುರುತಿಸಿ ಸಮಾಜ ಸೇವಕ ಹಬೀಬ ಶಿಲ್ಲೇದಾರ ಸಂಗೀತಾ ಕಲ್ಲೂರು ಇವಳ ಮದುವೆಗೆ 30 ಸಾವಿರ ರೂಪಾಯಿ ಹಣವನ್ನು ಸಹಾಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಹಬೀಬ ಶಿಲ್ಲೇದಾರ ಇಂದಿನ ದಿನಗಳಲ್ಲಿ ಇಂತಹ ಪ್ರಾಮಾಣಿಕರು ಸಿಗುವುದು ಅಪರೂಪವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಗೀತಾಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ ಬಿಳ್ಕೋಟ್ಟರು.