ಹಿಡಕಲ್ ಡ್ಯಾಂ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಗೆ ನಿರ್ದೇಶಕರ ಅವಿರೋಧವಾಗಿ ಆಯ್ಕೆ

  • 17 Dec 2023 , 9:56 PM
  • Belagavi
  • 155

ಹುಕ್ಕೇರಿ: ತಾಲೂಕಿನ ಹಿಡಕಲ್ ಡ್ಯಾಮಿನ ಶ್ರೀ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಇದರ 2020-21 ರಿಂದ 2024-25 ನೇ ಸಾಲಿಗಾಗಿ ಆಡಳಿತ ಮಂಡಳಿಯ ಸದಸ್ಯರ ಚುನಾವಣೆಯಲ್ಲಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಶಾಸಕ ಉಮೇಶ ಕತ್ತಿ ಹಾಗೂ ಬೆಳಗಾವಿ ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಇವರ ಉಪಸ್ಥಿತಿಯಲ್ಲಿ ಆಯ್ಕೆಮಾಡಲಾಯಿತು. ಸಹಕಾರದಿಂದ ಮತ್ತು ಸಮಸ್ತ ಸದಸ್ಯ ಬಾಂಧವರಿಂದ ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ರಾಜೇಂದ್ರ ಮಲಗೌಡ ಪಾಟೀಲ, ಶಂಕರರಾವ ಗೋವಿಂದರಾವ ಬಾಂದುರ್ಗೆ, ಶಶಿಕಾಂತ ಅಕ್ಕಪ್ಪ ನಾಯ್ಕ, ಬಸಗೌಡ ಬಾಳಗೌಡ ಪಾಟೀಲ, ಗುರು ಪಾಟೀಲ, ಸಂಗೀತಾ ಬಸಲಿಂಗ ಕರಗುಪ್ಪಿ, ರಾಜಶ್ರೀ ಮುರುಘೇಂದ್ರ ಕವಟಗಿಮಠ,ಅಣ್ಣಾಸಾಹೇಬ ಬಾಬುರಾವ ಪರ್ವತರಾವ, ಅರ್ಜುನನಾಯ್ಕ ಯಲ್ಲನಾಯ್ಕ ಪಾಟೀಲ, ಅಮರನಾಥ ಕಲ್ಲಪ್ಪ ಮಹಾಜನಶೆಟ್ಟಿ, ರವೀಂದ್ರ ಶಿವಗೌಡ ಪಾಟೀಲ, ಸುಭಾಷ ಮಲಗೌಡ ಪಾಟೀಲ, ಶ್ರೀಮಂತ ರಂಗಪ್ಪನವರು ಸಣ್ಣನಾಯಕ, ಶಿವಪ್ಪ ಕಲ್ಲಪ್ಪ ಘಸ್ತಿ, ಇವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಬೆಳಗಾವಿ ಉಪವಿಭಾಗಾಧಿಕಾರಿ, ಅಶೋಕ ತೇಲಿ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘದ ನಿರ್ದೇಶಕ ಕಲಗೌಡ ಪಾಟೀಲ, ಗುರುಸಿದ್ದ ಪಾಯನ್ನವರ, ನವಿನ ಕಡೇಲಿ, ಹಾಗೂ ಕಾರ್ಖಾನೆ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Read All News