ಡಾ.ಸೋನಾಲಿ ಅವರನ್ನು ಸನ್ಮಾನಿಸಿದ ಸಚಿವ ಪ್ರಭು ಚೌಹಾನ್

  • 15 Jan 2024 , 3:32 AM
  • Bengaluru
  • 112
ಬೆಂಗಳೂರು: ಇತ್ತಿಚಿಗೆ ಕರ್ನಾಟಕ ಪಶುಸಂಗೋಪನೆ ಮತ್ತು ಕಲ್ಯಾಣ ಸಚಿವ ಪ್ರಭು ಚೌಹಾನ್ ಅವರು ವಿಕಾಸ ಸೌಧದಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸಭೆ ನಡೆಸಿದರು ಈ ಸಂದರ್ಭದಲ್ಲಿ ಕೋವಿಡ್ 19 ಸಂದರ್ಭದಲ್ಲಿ ಶ್ರಮಿಸುತ್ತಿರುವ ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು ಪ್ರಾಣಿಗಳ ರಕ್ಷಣೆಯ ಕಾನೂನುಗಳು ಹೆಚ್ಚು ಕಠಿಣವಾಗುತ್ತವೆ. ಪ್ರಾಣಿಗಳಿಗೆ ಇದ್ದ ಕಾನೂನನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು ಈ ಸಂದರ್ಭದಲ್ಲಿ ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಆಯುಕ್ತರಾದ ನಟೇಶ್, ನಿರ್ದೇಶಕರಾದಎಂ.ಟಿ. ಮಂಜುನಾಥ ಹಾಗೂ ಕರ್ನಾಟಕ ಪ್ರಾಣಿಕಲ್ಯಾಣ ಮಂಡಳಿಯ ಎಲ್ಲ ಸದಸ್ಯರು ಹಾಜರಿದ್ದರು.

Read All News