ಬಿಹಾರ: ರಾಮ್ ವಿಲಾಸ್ ಪಾಸ್ವಾನ್ ಮತ್ತು ರಘುವನ್ಶ್ ಪ್ರಸಾದ್ ಅವರಿಗೆ ಗೌರವ ಸಲ್ಲಿಸುವ ಮೂಲಕ ಸಸಾರಂನ ಬಿಯಾಡಾ ಮೈದಾನದಲ್ಲಿ ಹಾಗೂ ಗಟಾದಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ರಾಜ್ಯವನ್ನು ಕತ್ತಲೆಗೆ ತಳ್ಳಿದ್ದಾರೆ ಎಂದು ಆರ್‌ಜೆಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
— Narendra Modi (@narendramodi) October 23, 2020
ಒಂದು ಕಾಲದಲ್ಲಿ ಬಿಹಾರವನ್ನು ಆಳಿದವರು ಈಗ ಮತ್ತೆ ಅಭಿವೃದ್ಧಿ ಹೊಂದುತ್ತಿರುವುದನ್ನು ತಮ್ಮ ದುರಾಸೆಯ ಕಣ್ಣುಗಳಿಂದ ನೋಡುತ್ತಿದ್ದಾರೆ ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು. ಬಿಹಾರದಲ್ಲಿ ಯಾರು ಹಿಂದುಳಿದಿದ್ದಾರೆ ಎಂಬುದನ್ನು ಬಿಹಾರ ಜನರು ಮರೆಯಬಾರದು ಎಂದು ಹೇಳಿದರು.
— Narendra Modi (@narendramodi) October 23, 2020
ಬಿಹಾರ ವಿಧಾನಸಭಾ ಚುನಾವಣೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತಿದ್ದು, ಮೊದಲ ಹಂತದ ಮತದಾನ ಅಕ್ಟೋಬರ್ 28 ರಂದು ನಡೆಯಲಿದೆ. ಒಟ್ಟಾರೆಯಾಗಿ ಪ್ರಧಾನಿ ಮೋದಿ ಇನ್ನು 12 ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.