ರೈತರ ಕನಸು ನನಸಾಗುವ ದಿನ ಬಂದಿದೆ; ರಾಜೇಂದ್ರ ಪಾಟೀಲ

  • 15 Jan 2024 , 2:36 AM
  • Belagavi
  • 107

ಯಮಕನಮರಡಿ : ಹಿಡಕಲ್ ಡ್ಯಾಮ್ ಭಾಗದ ರೈತರ ಕಳೆದ 30 ವರ್ಷಗಳ ಕನಸು ಈಗ ನನಸಾಗುತ್ತಿದೆ ಎಂದು ಹಿಡಕಲ್ ಡ್ಯಾಮ್ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಾಜೇಂದ್ರ ಪಾಟೀಲ ಹೇಳಿದ್ದಾರೆ. ಸೋಮವಾರ ದಿ.26 ರಂದು ಹಿಡಕಲ್ ಡ್ಯಾಮಿನ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಥಮ ಕಬ್ಬು ನುರಿಸುವ ಸಮಾರಂಭದಲ್ಲಿ ಮಾತನಾಡಿದ ಅವರು ಕಳೆದ 30 ವರ್ಷಗಳ ಹಿಂದೆ ಮಾಜಿ ಸಚಿವರಾದ ಮಲ್ಲಾರಿಗೌಡಾ ಪಾಟೀಲ, ಮಾಜಿ ಶಾಸಕ ಎಸ್.ಎಸ್.ಮಾಜಿಶೆಟ್ಟಿ ಮತ್ತು ಇನ್ನೀತರರು ಹಿಡಕಲ್ ಡ್ಯಾಮಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಕನಸು ಕಂಡಿದ್ದರು.

ಆರಂಭದ ಹಂತದಲ್ಲಿ ಹಲವಾರು ಸಮಸ್ಯೆಗಳನ್ನು ಶ್ರೀ ಸಂಗಮ ಸಹಕಾರಿ ಕಾರ್ಖಾನೆಯ ಆಡಳಿತ ಮಂಡಳಿಯವರು ಎದುರಿಸಬೇಕಾಯಿತು. ಹುಕ್ಕೇರಿ ಶಾಸಕ ಉಮೇಶ ಕತ್ತಿ ಮತ್ತು ಬಿ,ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಅವರ ಮಾರ್ಗದರ್ಶನದಲ್ಲಿ ಸಂಗಮ ಸಕ್ಕರೆ ಕಾರ್ಖಾನೆಯ ಪ್ರಗತಿಗೆ ಬುನಾದಿ ಹಾಕುತ್ತಿದ್ದು ಈಗ ಕಬ್ಬು ನುರಿಸುವ ಹಂಗಾಮ ಆರಂಭವಾಗಿದ್ದು ಮುಂಬರುವ ದಿನಗಳಲ್ಲಿ ಈ ಸಕ್ಕರೆ ಕಾರ್ಖಾನೆಯು ಈ ಭಾಗದ ರೈತಾಪಿ ಜನರ ಕಾಮಧೇನು ವಾಗಲಿದೆ ಎಂದು ರಾಜೇಂದ್ರ ಪಾಟೀಲ ತಿಳಿಸಿದ್ದಾರೆ.

ಸರಕಾರದ ಶೇರ 15 ಕೋಟಿ, ಸದಸ್ಯರಿಂದ ಸಂಗ್ರಹಿಸಲ್ಪಟ್ಟ 7 ಕೋಟಿ 76 ಲಕ್ಷ ರೂಗಳಿದೆ. ಸಂಗಮ ಕಾರ್ಖಾನೆ ಪ್ರಗತಿಗೆ ಮುನ್ನಡೆಸಲು ಬೆಳಗಾವಿ ಬಿಡಿಸಿಸಿ ಲೀಡ್ ಬ್ಯಾಂಕಿಂದ  35 ಕೋಟಿ ಸಾಲ ಮತ್ತು ವಿಜಯಪುರ ಬಿ.ಡಿ.ಸಿ.ಸಿ ಬ್ಯಾಂಕನಿoದ 10 ಕೋಟಿ, ಮತ್ತು ಬಾಗಲಕೋಟ ಬಿ.ಡಿ.ಸಿ.ಸಿ ಬ್ಯಾಂಕನಿAದ 10 ಕೋಟಿ, ಮಂಗಳೂರ ಬಿ.ಡಿ.ಸಿ.ಸಿ ಬ್ಯಾಂಕನಿoದ 20 ಕೋಟಿ ಒಟ್ಟು 75 ಕೋಟಿ ಸಾಲಗಳನ್ನು ಪಡೆದು ಕಾರ್ಖಾನೆ ಕಟ್ಟಡ ಮತ್ತು ಮಶೀನರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹಂಗಾಮು ಮುಂದುವರಿಸಲು ವರ್ಕಿಂಗ್ ಕ್ಯಾಪಿಟಲ್ ಸಲುವಾಗಿ ಬೆಳಗಾವಿ ಬಿ.ಡಿ.ಸಿ.ಸಿ ಬ್ಯಾಂಕಿನಿoದ 10 ಕೋಟಿ ರೂ ಸಾಲವನ್ನು ಪಡೆಯಲಾಗಿದೆ.

ಪ್ರತಿ ದಿನ 2500 ಟನ್ ಕಬ್ಬು ನುರಿಸಲಾಗುವದು. ಒಟ್ಟು 4 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಕಾರ್ಖಾನೆಯಿಂದ 8 ಮೇಗಾವೆಟ್ ವಿದ್ಯುತ್ ಉತ್ಪಾದಿಸಲಾಗುವದು ಮತ್ತು ಅದರಲ್ಲಿ ಮೂರುವರೆ ಮೆಗಾವ್ಯಾಟ್ ಕಾರ್ಖಾನೆಯ ಕಾಮಗಾರಿಗೆ ಬಳಕೆ ಮಾಡಲಾಗುವದು. ಮತ್ತು ಇನ್ನುಳಿದ ನಾಲ್ಕವರೆ ಮೆಗಾವ್ಯಾಟ್ ಹೊರಗೆ ಮಾರಾಟ ಮಾಡಲಾಗುವದು ಎಂದು ರಾಜೇಂದ್ರ ಪಾಟೀಲ್ ಹೇಳಿದರು. ನಿಡಸೋಸಿ ಶ್ರೀ ಸಿದ್ದ ಸಂಸ್ಥಾನ ಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಕಬ್ಬು ನುರಿಸುವ ಕಾಮಗಾರಿಗೆ ಚಾಲನೆ ನೀಡಿ ಸಹಕಾರ ಸಂಘದಲ್ಲಿ ಒಕ್ಕೂಟ ಎನ್ನುವದು ಮಹತ್ವವಾದದ್ದು ಮನುಷ್ಯನ ಜೀವನದಲ್ಲಿ ಅನೆಕ ಸಮಸ್ಯೆಗಳು ಎದುರಾದರು ಕೂಡಾ ಎದುರಿಸುವ ದಿಟ್ಟತನ ಬೇಕು ಶ್ರೀ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅನೇಕ ಸಮಸ್ಯೆಗಳು ಎದುರಾದರೂ ಕೂಡಾ ಅಧ್ಯಕ್ಞ ರಾಜೇಂದ್ರ ಪಾಟೀಲ ಮತ್ತು ಆಡಳಿತ ವರ್ಗದವರು ಅವುಗಳನ್ನು ಎದುರಿಸಿ ಕಾರ್ಖಾನೆಯನ್ನು ಒಂದು ಹಂತಕ್ಕೆ ತರುತಿದ್ದಾರೆ ಎಂದು ಹೇಳಿದರು. ಆರಂಭದಲ್ಲಿ ನಿರ್ದೇಶಕ ಬಸಗೌಡಾ. ಬಾಳಗೌಡ. ಪಾಟೀಲ ಸ್ವಾಗತಿಸಿದರು. ಸಮಾರಂಭದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು, ಹತ್ತರಗಿ ಕಾರಿಮಠದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು, ಘೋಡಗೇರಿ ಶ್ರೀ ಶಿವಾನಂದ ಮಠದ ಶ್ರೀ ಮಲ್ಲಯ್ಯಾ ಮಹಾಸ್ವಾಮಿಗಳೂ ಮತ್ತು ಉ.ಖಾನಾಪೂರ ಶ್ರೀ ಮರುಳ ಸಿದ್ದೇಶ್ವರ ಬೃಹನ್ಮಠ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ನಿರ್ದೇಶಕರಾದ ಶಂಕರರಾವ ಗೋವಿಂದರಾವ ಬಾಂದುರಗೆ, ಶಶಿಕಾಂತ ಅಕ್ಕಪ್ಪ ನಾಯಿಕ, ಅರ್ಜುನನಾಯ್ಕಿ. ಯಲ್ಲನಾಯ್ಕ. ಪಾಟೀಲ, ಗುರು ಪಾಟೀಲ, ಅಣ್ಣಾಸಾಹೇಬ ಬಾಬುರಾವ ಪರ್ವತರಾವ, ಅಮರನಾಗ ಕಲ್ಲಪ್ಪ ಮಹಾಜನಶೆಟ್ಟಿ, ರವಿಂದ್ರ ಶಿವಗೌಡ ಪಾಟೀಲ, ಸುಭಾಷ ಮಲಗೌಡಾ ಪಾಟೀಲ, ಶ್ರೀಮಂತ ಗಂಗಪ್ಪ ಸನ್ನಾಯಿಕ, ಶಿವಪ್ಪಾ ಕಲ್ಲಪ್ಪಾ ಗಸ್ತಿ, ಸಂಗೀತಾ ಬಸಲಿಂಗ ಕರಗುಪ್ಪಿ, ರಾಜಶ್ರೀ ಮುರುಘೇಂದ್ರ ಕವಟಗಿಮಠ ಉಪಸ್ಥಿತರಿದ್ದರು. ರೈತರು ಶೇರುದಾರರು ಕಾರ್ಖಾನೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Read All News