ದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ತೈಲ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೇ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರಿಗೆ ರೂ.5 ರಷ್ಟು ವರೆಗೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಕೋವಿಡ್ ವಿರುದ್ಧದ ಹೋರಾಟಕ್ಕೆ ಹಣ ಸಂಗ್ರಹಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆಈ . ಜಗತ್ತಿನಲ್ಲಿ ಅತೀ ಹೆಚ್ಚು ಭಾರತದಲ್ಲೆ ತೈಲ ಬೆಲೆ ಎರಿಕೆ ಯಾಗಿದೆ.ಈ ಹಿಂದೆಯೆ ಪೆಟ್ರೋಲ್ ಸುಂಕವನ್ನು ₹12 ಮತ್ತು ಡೀಸೆಲ್ ಮೇಲಿನ ಸುಂಕವನ್ನು ರೂ.9 ಏರಿಕೆ ಮಾಡಿತ್ತು. ಕೊರೋನಾ ಲಾಕ್ ಡೌನ್ ಎಪೆಕ್ಟ ಇಡೀ ದೇಶಕ್ಕೆ ತಟ್ಟಿದ್ದರಿಂದ.

ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ ಇದೇ ರೀತಿ ಮುಂದುವರೆದರೆ ಸಾರ್ವಜನಿಕ ಜನ ಜೀವನ ಮತ್ತಷ್ಟು ಕಷ್ಟಕರವಾಗಲಿದ್ದು. ಕೊರೊನಾ ಮಹಾಮತಿ ಇಂದ ರಾಷ್ಟ್ರ ಆರ್ಥಿಕ ಸಮಸ್ಯೆಯನ್ನು ಎದುರಿಸತ್ತಿರುವದರಿಂದ ತೈಲ ಬೆಲೆ ಮೇಲಿನ ಸುಂಕ ಹೆಚ್ಚಳ ಮಾಡುವದು ಅನಿವಾರ್ಯ ಎಂದು ಕೇಂದ್ರ ಸರ್ಕಾರ ಹೇಳಿದೆ.