ಬೆಳಗಾವಿ: ಈ ಭಾರಿ ಯಡಿಯೂರಪ್ಪಾಜಿ ಸರ್ಕಾರದಲ್ಲಿ ಪಂಚಮಸಾಲಿ 2ಎ ಮೀಸಲಾತಿ ಕೊಡಬೇಕು. ಇಲ್ಲದಿದ್ದರೆ ಮುಂದಿನ ಭಾರಿ ಕಾಂಗ್ರೆಸ್ ಸರ್ಕಾರ ಬಂದರೆ 2ಎ ಮೀಸಲಾತಿ ಪಕ್ಕಾ ಎಂದು ವೇದಿಕೆ ಮೇಲೆ ಮುರುಗೇಶ ನಿರಾಣಿಗೆ ಸವಾಲು ಹಾಕಿದ ಲಕ್ಷ್ಮೀ ಹೆಬ್ಬಾಳಕರ.

ಲಿಂಗಾಯತ ಪಂಚಮಶಾಲಿ ಸಮಾಜಕ್ಕೆ ರಾಜ್ಯ ಸರ್ಕಾರದಿಂದ ಪ್ರವರ್ಗ-2ಎ ಹಾಗೂ ಕೇಂದ್ರದಿಂದ ಒಬಿಸಿ ಮೀಸಲಾತಿ ನೀಡಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಮೃತ್ಯುಂಜಯ ಸ್ವಾಮೀಜಿಯ ನೇತೃತ್ವದಲ್ಲಿ ಇಂದು ಸುವರ್ಣ ವಿಧಾನಸೌಧ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡ ಹಿನ್ನೆಲೆಯಲ್ಲಿ ವೇದಿಕೆ ಮೇಲೆ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಮುರುಗೇಶ ನಿರಾಣಿಗೆ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸವಾಲ್ ಹಾಕಿದರು.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಿದರೆ ನಾನು ನಿಮ್ಮ ಮನೆಗೆ ಬೆಳಗಾವಿಯಿಂದ ಕುಂದಾ ತಂದು ತಿನ್ನಿಸುತ್ತೇನೆ. ಒಂದು ಈ ಭಾರಿ ವೇಳೆ ಆಗದಿದ್ದರೆ ಮುಂದಿನ ಭಾರಿ ನೀವು ನನ್ನ ಮನೆಗೆ ಬಂದು 4 ಬಂಗಾರದ ಬಳೆ ನೀಡಬೇಕು. ಇದು ಸಹೋದರಿಯಿಂದ ಸಹೋದರನಿಗೆ ಸವಾಲ್ ಎಂದು ಲಕ್ಷ್ಮೀ ಹೆಬ್ಬಾಳಕರ ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಒಟ್ಟಾರೆಯಾಗಿ ಈ ಸಹೋದರ-ಸಹೋದರಿಯ ಸವಾಲಿನಲ್ಲಿ ಯಾರು ಜಯ ಸಾಧಿಸುತ್ತಾರೆ ಎಂದು ಕಾದು ನೋಡಬೇಕಿದೆ.