ಸದ್ಯದ ಚುನಾವಣೆಯಲ್ಲಿ ಕಾಂಗ್ರೇಸ್ ಹೆಚ್ಚು ಸ್ಥಾನ ಗಳಿಸಿ ಆಡಳಿತಕ್ಕೆ ಬರುತ್ತದೆ; ಕೆ.ಬಿ.ಕೋಳಿವಾಡ

  • 14 Jan 2024 , 10:53 PM
  • Haveri
  • 124

ರಾಣೇಬೆನ್ನೂರು: ಸದ್ಯದಲ್ಲೇ ನಡೆಯಲಿರುವ ವಿಧಾನ ಸಭಾ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರ ಎರಡು ಹಾಗೂ ಎರಡು ವಿಧಾನಸಭೆಗಳಲ್ಲಿ ಕಾಂಗ್ರೆಸ್ ಜಯಗಳಿಸಲಿದೆ ಎಂದು ಮಾಜಿ ವಿಧಾನಸಭಾದ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು. ಇಂದು ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೊಂಕು ಹರಡದಂತೆ ತಡೆಗಟ್ಟುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದೆ. ದೇಶದಲ್ಲಿ ಕೋರೋನ್ ವೈರಸ್ ತಡೆಗಟ್ಟಲು ಸರಿಯಾದ ಕ್ರಮಗಳನ್ನು ಸರ್ಕಾರ ಕೈಗೊಳ್ಳದೇ ನಿರ್ಲ್ಲಕ್ಷö್ಯ ವಹಿಸಿದೆ. ಕೊರೋನಾ ವೈರಸ್ ಹಾವಳಿ ಮೊದಲೇ ತಿಳಿದಿದ್ದರು ಅಮೇರಿಕಾ ಅಧ್ಯಕ್ಷ ಸ್ವಾಗತಕ್ಕೆ ಹಾಗೂ ಬೃಹತ್ ಸಭೆ ಸಮಾರಂಭಗಳನ್ನು ಮಾಡುತ್ತ ಕುಳಿಕೊಂಡರು. ಹೊರದೇಶದಿಂದ ಆಗಮಿಸಿದವರನ್ನು ಕ್ವಾರಂಟೈನ್ ಮಾಡಿದ್ದರೆ ಈ ಮಹಾಮಾರಿ ಉಲ್ಬಣಗೊಳ್ಳುತ್ತಿರಲಿಲ್ಲ ಆಗಲೇ ಸೂಕ್ತ ಕ್ರಮಕೈಗೊಳ್ಳದೇ ಕೈ ಚೆಲ್ಲಿ ಕುಳಿತುಕೊಂಡು ನಿಮ್ಮರಕ್ಷಣೆ ನಿಮ್ಮಕೈಯಲ್ಲಿ ಎಂದರು. ಇದರಿಂದಾಗಿ ಎಷ್ಟೋ ಜನರು ಸತ್ತರು, ಇದನ್ನೆ ಲಾಭವಾಗಿ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳು ಕೋಟ್ಯಾಂತರ ಹಣ ವಸೂಲಿಗೆ ಅನುಕೂಲವಾಯಿತು. ಎಂದರು. ಕೇAದ್ರ ಸರ್ಕಾರ ಅನೇಕ ಕಾಯ್ದೆಗಳನ್ನು ಜಾರಿಗೆ ತಂದರು ಅವು ಜನಪರಯಿರದೆ ಜನರ ಕೆಂಗಣ್ಣಿಗೆ ಗುರಿಯಾಗಿದೆ ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಈ ಹಿಂದೆ ರೈತರಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎಂದಿದ್ದರು ಇವೆಲ್ಲವನ್ನು ಖಾಸಗೀಕರಣ ಮಾಡಿದ್ದಾರೆ ಬಂಡವಾಳ ಶಾಹಿಗಳು ಉಚಿತವಾಗಿ ರೈತನಿಗೆ ಕರೆಂಟ್ ನೀಡುತ್ತಾರೆ ದೇಶದ ಆರ್ಥಿಕ ಪರಿಸ್ಥಿತಿ 30ವರ್ಷ ಹಿಂದಕ್ಕೆ ಹೋಗಿದೆ. ಹೊಸ ಕಾನೂನುಗಳಿಂದ ದೇಶದಲ್ಲಿ ಅನೇಕ ಕಂಪನಿಗಳು ಮುಚ್ಚಿ ಹೋಗಿ ನಿರುದ್ಯೋಗ ಸಮಸ್ಯೆ ಎದುರಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮುಂದೆ ಕಾಂಗ್ರೇಸ್ ಪಕ್ಷ ಆಡಳಿತಕ್ಕೆ ಬರುತ್ತದೆ ಕಾಂಗ್ರೇಸ್ ಶಿಸ್ತುನಿನ ಪಕ್ಷವಾಗಿದೆ. ಇಲ್ಲಿ ಶಾಸಕರ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ ಸಿಎಂ ಯಾರಬೇಕು ನಿರ್ಣಯ ಮಾಡುತ್ತದೆ. ಈಗ ಪಕ್ಷಕ್ಕೆ ಬಹುಮತವಿಲ್ಲ ಮುಂದೆ ಬರುತ್ತೆ ಬಂದ ಮೇಲೆ ಪಕ್ಷ ವಿರೋಧಿ ಹೇಳಿಕೆ ನೀಡಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

Read All News