ಮೈಸೂರು: ನಗರದ ಕಾಳಿದಾಸ ರಸ್ತೆಯಲ್ಲಿರುವ ಸುಮಾರು 45 ವರ್ಷಗಳ ಹಿಂದಿನ ಒಳಚರಂಡಿಯ ಮರು ನಿರ್ಮಾಣ ಕಾಮಗಾರಿಗೆ ಮಹಾನಗರ ಪಾಲಿಕೆ ವಾರ್ಡ್ ಸಂ-19 ರ ಸದಸ್ಯೆ ಭಾಗ್ಯಮಾದೇಶ್ ಸಮ್ಮುಖದಲ್ಲಿ ಶಾಸಕ ಎಲ್.ನಾಗೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು.

ಮಹಾನಗರಪಾಲಿಕೆಯ ಸಾಮಾನ್ಯ ಅನುದಾನದಲ್ಲಿ ಬಿಡುಗಡೆಯಾದ 49.00 ಲಕ್ಷ ರೂ. ಕಾಮಗಾರಿ ವೆಚ್ಚದಲ್ಲಿ ಒಂಟಿಕೊಪ್ಪಲು ಮಾತೃ ಮಂಡಳಿ ವೃತ್ತದಿಂದ – ಚಂದ್ರಕಲಾ ಆಸ್ಪತ್ರೆಯವರೆಗಿನ ಒಳಚರಂಡಿ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮೈಸೂರು ಮಹಾನಗರಪಾಲಿಕೆಯ ವಲಯ ಕಚೇರಿ-4 ರ ಸಹಾಯಕ ಕಮೀಷನರ್ ಪ್ರಿಯದರ್ಶಿನಿ, ಒಳ ಚರಂಡಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ್, ಸಹಾಯಕ ಕಾ.ಪಾ.ಇಂ ರಂಜಿತ್ ಕುಮಾರ್, ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರರಾಜು, ಮಾಜಿ ಮಹಾನಗರ ಪಾಲಿಕೆ ಸದಸ್ಯ ಬೋ. ಉಮೇಶ್, ಜಯಪ್ರಕಾಶ್, ಚಿಕ್ಕವೆಂಕಟು, ಪ್ರಧಾನ ಕಾರ್ಯದರ್ಶಿ ಪುನೀತ್ ಹಾಗೂ ರಮೇಶ್ ಚಾಮರಾಜ ಕ್ಷೇತ್ರದ ಉಪಾಧ್ಯಕ್ಷ ಕುಮಾರಗೌಡ, ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಮಹೇಶ್, ಮಾದೇಶ್ ಕ.ರ.ವೇ, ಶಿವಪ್ರಕಾಶ್, ಬಾಲಣ್ಣ ಹಾಗೂ ಮುಂತಾದವರು ಪಾಲ್ಗೊಂಡಿದ್ದರು.