ಶಿಗ್ಗಾಂವ ಪುರಸಭೆ ಬಿಜೆಪಿ ಮಡಿಲಿಗೆ

  • 7 Jan 2024 , 3:33 AM
  • Haveri
  • 105

ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣದ ಪುರಸಭೆ ಆಡಳಿತ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಶ್ರೀಕಾಂತ ಬುಳ್ಳಕ್ಕನವರ ಅಧ್ಯಕ್ಷರಾಗಿ, ಮಂಜುನಾಥ ಬ್ಯಾಹಟ್ಟಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿಯಿಂದ ಶ್ರೀಕಾಂತ ಬುಳ್ಳಕ್ಕನವರ ಸ್ಪರ್ಧೆಗಿಳಿದರೆ, ಕಾಂಗ್ರೇಸ್ ಪಕ್ಷದಿಂದ ಗೌಸ ಖಾನ ಮುನ್ಸಿ ಸ್ಫರ್ಧೇಗಿಳಿದರು. ನಂತರ ಪಕ್ಷೇತರ ಬೆಂಬಲದಿoದ ಅಧ್ಯಕ್ಷರಾಗಿ ಶ್ರೀಕಾಂತ ಬುಳ್ಳಕ್ಕನವರ ಆಯ್ಕೆಯಾದರು.

ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಜುನಾಥ ಬ್ಯಾಹಟ್ಟಿ ಯಾವೂದೇ ಪೈಪೋಟಿ ಇಲ್ಲದೇ ಅವಿರೋಧ ಆಯ್ಕೆಯಾದರು.. ಪಕ್ಷೇತರ ಸದಸ್ಯರಾದ ಜ್ಯೋತಿ ಕೊಟ್ರಪ್ಪ ನಡೂರ, ರಮೇಶ ವನಹಳ್ಳಿ, ರೇಖಾ ಸಂಗಪ್ಪ ಕಂಕನವಾಡ ಸಾಮಾನ್ಯ ವರ್ಗವಾಗಿದ್ದರೂಬಿಜೆಪಿ ಅಭ್ಯರ್ಥಿ ಶ್ರೀಕಾಂತ ಬುಳ್ಳಕ್ಕನವರಿಗೆ ಬೆಂಬಲ ಸೂಚಿಸಿದರು.

ಬಿ.ಜೆ.ಪಿ ಪಕ್ಷದಿಂದ ಆಯ್ಕೆಯಾದ ಶಾಂತಬಾಯಿ ಸುಭೇದಾರ, ಶ್ರೀಕಾಂತ ಬುಳ್ಳಕ್ಕನವರ, ದಯಾನಂದ ಅಕ್ಕಿ, ಸಿಧ್ದಾರ್ಥಗೌಡ ಪಾಟೀಲ, ಸುಭಾಸ ಚವ್ಹಾಣ, ರೂಪಾ ಬನ್ನಿಕೊಪ್ಪ ಹೀಗೆ ಅನೇಕ ಸದಸ್ಯರು ಅಧ್ಯಕ್ಷ ಸ್ಥಾನದ ಪೈಪೋಟಿ ಹೆಚ್ಚಿದ್ದರೂ ಪಕ್ಷೇತರನ್ನು ಮನವಲಿಸುವಲ್ಲಿ ಬಿಜೆಪಿ ಪಕ್ಷದ ವರೀಷ್ಠರ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ.

ಪಕ್ಷೇತರ ಸದಸ್ಯರು ಆಡಳಿತದ ಅಭಿವೃದ್ಧಿ ಸಹಕಾರಕ್ಕೆ ಬೆಂಬಲ ಸೂಚಿಸಿದ್ದಾಗಿ ಪಕ್ಷೇತರರು ಹೇಳಿಕೆ ನೀಡಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ನಮ್ಮಲ್ಲಿ ಪಕ್ಷ ಬೇಧವಿಲ್ಲ, ಕೇವಲ ಅದು ಚುನಾವಣಗೆ ಮಾತ್ರ ಶೀಮಿತ, ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಸಹಕರಿಸಿ ಯಾವೂದೇ ಶರತ್ತಿಲ್ಲದೇ ಪಕ್ಷೇತರರು ಬೆಂಬಲ ಸೂಚಿಸಿದ್ದಾರೆ.

ಆಕಾಂಕ್ಷಿಗಳು ಹೆಚ್ಚಿರುವ ಕಾರಣ ಎಲ್ಲಾ ಪಕ್ಷೇತರರೂ ಸಹಕಾರ ನೀಡಿದ್ದಾರೆ, ಬರುವ ದಿನಗಳಲ್ಲಿ ಅವಕಾಶ ನೀಡುವ ಚಿಂತನೆಯಿದೆ ಎಂದರು ಅಲ್ಲದೇ ಪಟ್ಟಣದ ವ್ಯಾಪ್ತಿಯಲ್ಲಿ ನಾಗರಿಕರಿಗೆ ಕುಡಿಯುವ ನೀರು, ಬೀದಿ ದೀಪ ಸೌಲಭ್ಯತೆ, ರಸ್ತೆ ಅಭಿವೃದ್ಧಿ ಬೆಳೆಯುತ್ತಿರುವ ಪಟ್ಟಣದ ವಿಸ್ಥಾರಕ್ಕೆ ತಕ್ಕಂತೆ ನಾಗರೀಕ ಸೌಲಭ್ಯತೆಗೆ ಪುರಸಭೆಗೆ ಅನುದಾನ ನೀಡಿ ಹೆಚ್ಚು ಸಹಕಾರ ನೀಡುವುದಾಗಿ ತಿಳಿಸಿದ ಅವರು ಪಟ್ಟಣದ ವ್ಯಾಪ್ತಿಯ 5 ಕಿ.ಮಿ. ವ್ಯಾಪ್ತಿಯನ್ನು ಪುರಸಭೆಯ ಆಡಳಿತ ವ್ಯಾಪ್ತಿಯಲ್ಲಿ ಸೇರಿಸುವ ಪ್ರಸ್ಥಾವನೆ ಸರ್ಕಾರದಲ್ಲಿ ಮಂಜೂರಾತಿ ಪಡೆದಿದೆ.

ಸದ್ಯದಲ್ಲಿಯೇ ಆದೇಶ ಹೊರಬೀಳಲಿದೆ ಎಂದರು. ನoತರ ನೂತನ ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಮಾತನಾಡಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರ ಮಾರ್ಗದರ್ಶನದಲ್ಲಿ ಉಪಾಧ್ಯಕ್ಷರು ಹಾಗೂ ಎಲ್ಲ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರಿಗಳೊಂದಿಗೆ ಚರ್ಚಿಸಿ ಪಟ್ಟಣದ ಅಭಿವೃದ್ದಿಗಾಗಿ ಶ್ರಮಿಸುತ್ತೇನೆ. ಎಂದು ಹೆಳೀದರು.

ಈ ಸಂದರ್ಬದಲ್ಲಿ ಸಿದ್ದಾರ್ಥಗೌಡ ಪಾಟೀಲ, ಶಾಂತಾಬಾಯಿ, ಸುಬೇಧಾರ, ಸುಭಾಸ ಚವ್ಹಾಣ, ದಯಾನಂದ ಅಕ್ಕಿ ರೂಪಾ ಬನ್ನಿಕೊಪ್ಪ, ಪಕ್ಷೇತರರಲ್ಲಿ ರಮೇಶ ವನಹಳ್ಳಿ, ರೇಖಾ ಸಂಗಪ್ಪ ಕಂಕನವಾಡ ಜ್ಯೋತಿ ಕೋಟ್ರಪ್ಪ ನಡೂರ, ಅಲ್ಲದೇ ಭಾಜಪ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ, ದೇವಣ್ಣ ಚಾಕಲಬ್ಬಿ, ಕೊಟ್ರಪ್ಪ ನಡೂರು. ಇದ್ದರು. ಅಲ್ಲದೇ ಹಲವಾರು ಭಾಜಪ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಸಂಬ್ರಮಿಸಿದರು. ಚುನವಾಣೆಯನ್ನು ತಹಶೀಲ್ದಾರ ಪ್ರಕಾಶ ಕುದರಿ ಸಿ.ಎಸ್.ಕುಂಬಾರ. ನಡೆಸಿದರು. ಅಲ್ಲದೇ ಪುರಸಭೆಯ ಶಿಬ್ಬಂಧಿಗಳು ಪಾಲ್ಗೊಂಡಿದ್ದರು.

Read All News